Home » Yashvanth gruji: ರಾಜ್ಯದ ಈ 8 ಜನ ರಾಜಕಾರಣಿಗಳು ಸದ್ಯದಲ್ಲೇ ಜೈಲು ಸೇರ್ತಾರೆ- ಸ್ಪೋಟಕ ಭವಿಷ್ಯ ನುಡಿದ ಯಶ್ವಂತ್ ಗುರೂಜಿ!!

Yashvanth gruji: ರಾಜ್ಯದ ಈ 8 ಜನ ರಾಜಕಾರಣಿಗಳು ಸದ್ಯದಲ್ಲೇ ಜೈಲು ಸೇರ್ತಾರೆ- ಸ್ಪೋಟಕ ಭವಿಷ್ಯ ನುಡಿದ ಯಶ್ವಂತ್ ಗುರೂಜಿ!!

1 comment
Yashwant guruji

Yashwant guruji: ಈ ಸಲದ ಮಹಾಲಯ ಅಮವಾಸ್ಯೆಯ ಸೂರ್ಯ ಗ್ರಹಣದ ಪರಿಣಾಮದಿಂದಾಗಿ ಕೆಲ ರಾಜಕಾರಣಿಗಳು ಜೈಲು ಸೇರೋದು ಪಕ್ಕಾ ಎಂದು ಕಾಲಜ್ಞಾನಿ ಡಾ. ಯಶ್ವಂತ ಗುರೂಜಿಯ(Yashwant guruji) ಮತ್ತೊಂದು ಸ್ಟೋಟಕ ಭವಿಷ್ಯ ನುಡಿದಿದ್ದಾರೆ.

ಹೌದು, ತುಮಕೂರು‌ ಜಿಲ್ಲೆ ತಿಪಟೂರು ತಾಲ್ಲೂಕಿನ ನೋಣವಿನಕೆರೆ ರಂಗಾಪುರ(Nonavinakere rangapura) ಮೂಲದ ಕಾಲಜ್ಞಾನಿ ಯಶ್ವಂತ ಗುರೂಜಿ ಚುನಾವಣೆಗೂ ಮೊದಲು ಕಾಂಗ್ರೆಸ್ ಸರ್ಕಾರ ಪೂರ್ಣ ಬಹುಮತ ಬರುತ್ತದೆ ಎಂದು ಭವಿಷ್ಯ ನುಡಿದ್ದರು. ಅದರಂತೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ‌ ಹಿಡಿದಿದೆ. ಅವರು ನುಡಿದ ಭವಿಷ್ಯವಾಣಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ಈ ಬೆನ್ನಲ್ಲೇ ಗುರೂಜಿಯವರು ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದು, ಮಹಾಲಯ ಅಮವಾಸ್ಯೆಯ ಸೂರ್ಯ ಗ್ರಹಣದ ಪರಿಣಾಮವಾಗಿ ಲೋಕಸಭಾ ಚುನಾವಣೆಗೂ ಮುನ್ನವೇ ರಾಜ್ಯದ 8ಕ್ಕೂ ಅಧಿಕ ಪ್ರಮುಖ ರಾಜಕಾರಣಿಗಳು ಜೈಲು ಸೇರುತ್ತಾರೆ ಎಂದು ಶಾಕ್ ನೀಡಿದ್ದಾರೆ.

ನೊಣವಿನಕೆರೆಯಲ್ಲಿ ಕಾಲಜ್ಞಾನಿ ಭವಿಷ್ಯ ನುಡಿದಿರುವ ಅವರು, ಇದೇ ಅಕ್ಟೋಬರ್ 14ರಂದು ಮಹಾಲಯ ಅಮಾವಾಸ್ಯೆಯಂದು ಸೂರ್ಯ ಗ್ರಹಣ ಸಂಭವಿಸಲಿದೆ. ಸೂರ್ಯ ಎಂದರೆ ರಾಷ್ಟ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅಧಿಪತಿ. ಸರ್ಕಾರದ ಕೆಲಸ ಮಾಡ್ತಿರುವ ಅಂದ್ರೆ ರಾಜಕಾರಣಿಗಳಿಗೆ ದೊಡ್ಡ ಕಂಟಕ ಇದೆ. ಎಲ್ಲ ಸ್ಥರದ ರಾಜಕಾರಣಿಗಳು, ಅಧಿಕಾರಿಗಳಿಗೆ ಗ್ರಹಣದ ಎಫೆಕ್ಟ್ ಆಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Bigg boss-10: ಬಿಗ್‌ಬಾಸ್‌ ಮನೆಗೆ ಹೊಕ್ಕ ಪ್ರದೀಪ್‌ ಈಶ್ವರ್‌ಗೆ ಬಿಗ್ ಶಾಕ್ – ಶಾಸಕ ಸ್ಥಾನಕ್ಕೆ ಬಂತು ಕುತ್ತು ?!

ಅಲ್ಲದೆ ಗ್ರಹಣದ ಮುನ್ನ ಮೂರು ತಿಂಗಳು ಹಾಗೂ ಗ್ರಹಣ ನಂತರದ ಮೂರು ತಿಂಗಳು ಪ್ರಭಾವ ಬೀರುತ್ತದೆ, ಗ್ರಹಣದಿಂದ ಕೇವಲ ಕೆಟ್ಟ ಪರಿಣಾಮ ಆಗಲ್ಲ, ಕೆಲ ರಾಜಕಾರಣಿಗಳಿಗೆ ಯೋಗ ಕೂಡ ಪ್ರಾಪ್ತಿ ಆಗುತ್ತದೆ. ಮೇಷ, ಕರ್ಕಾಟಕ(ಕಟಕ), ವೃಶ್ಚಿಕ, ಮಕರ ರಾಶಿಯ ಮಂದಿಗೆ ಶುಭ ಫಲವನ್ನು ಗ್ರಹಣ ನೀಡುತ್ತದೆ. ಆದರೆ, ವೃಷಭ ರಾಶಿಯ ಕೃತಿಕ ನಕ್ಷತ್ರದ ರಾಜಕಾರಣಿಗಳು ಜೈಲು ಸೇರ್ತಾರೆ. ವೃಷಭ ರಾಶಿಯ ಕೃತಿಕ ನಕ್ಷತ್ರದ ಮಂದಿ ಶಾಂತಿ ಕರ್ಮಗಳನ್ನ ಮಾಡಿಕೊಳ್ಳಬೇಕಿದೆ. ಇಲ್ಲವಾದ್ರೆ ಗ್ರಹಣದ ಕಂಟಕಕ್ಕೆ ಗುರಿ ಆಗ್ತಾರೆ ಎಂದು ಸಲಹೆ ನೀಡಿದರು.

ಇನ್ನೂ ಪ್ರಧಾನಿ ನರೇಂದ್ರ ಮೋದಿ ನಂತರ ಸ್ತ್ರಿ ದೇಶ ಆಳ್ತಾಳೆ ಅಂತಾ ಹೇಳಿದ್ದೆ. ಅದು ಕೂಡ ನಿಜ ಆಗುವ ಲಕ್ಷಣ ಕಾಣ್ತಿದೆ. ಹೆಣ್ಮಕ್ಕಳಿಗೆ ಮೀಸಲಾತಿ ಸಿಕ್ತಿದೆ. ಒಳ್ಳೆಯದು ಆಗುವ ಲಕ್ಷಣ ಕೂಡ ಗೋಚರಿಸುತ್ತಿದೆ.ಮುಂದಿನ ನವೆಂಬರ್, ಡಿಸೆಂಬರ್ ಹಾಗೂ ಜನವರಿಯಲ್ಲಿ ರಾಜ್ಯಕ್ಕೆ ಕಂಟಕ ಇದೆ. ಕಾರಣ ರಾಜ್ಯ ರಾಜಕಾರಣದಲ್ಲಿ ದ್ವೇಷದ ರಾಜಕೀಯ ಹೆಚ್ಚಾಗ್ತಿದೆ. ಇಲ್ಲಿತನ ಒಂದು ತರಹ ಆದ್ರೆ, ಗ್ರಹಣದ ನಂತರ ಪ್ರಭಾವ ಹೆಚ್ಚಾಗಿ, ಕಂಟಕ ಜಾಸ್ತಿ ಆಗುತ್ತದೆ. ಹೀಗಾಗಿ ರಾಜಕಾರಣಿಗಳು ದೈವದ ಮೋರೆ ಹೋಗಿ ಶಾಂತಿ ಕರ್ಮಗಳನ್ನ ಮಾಡಿಕೊಳ್ಳಲಿ. ಕಂಟಕದ ಬಗ್ಗೆ ಎಚ್ಚರಿಸಿದ್ದಲ್ಲದೆ ಪರಿಹಾರ ಮಾಡಿಕೊಳ್ಳಲ್ಲಿ ಎಂದು ಡಾ. ಯಶವಂತ ಗುರೂಜಿ ಸಲಹೆ ನೀಡಿದರು.

ಇದನ್ನೂ ಓದಿ: Moodbidre: ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಉದ್ಯೋಗಿ

You may also like

Leave a Comment