Home » Anil Ambani: ಯೆಸ್‌ ಬ್ಯಾಂಕ್‌ಗೆ 3000 ಕೋಟಿ ಸಾಲ ವಂಚನೆ ಪ್ರಕರಣ: ಅನಿಲ್‌ ಅಂಬಾನಿಗೆ ಸೇರಿದ 50 ಕಂಪನಿಗಳ ಮೇಲೆ ಇಡಿ ದಾಳಿ

Anil Ambani: ಯೆಸ್‌ ಬ್ಯಾಂಕ್‌ಗೆ 3000 ಕೋಟಿ ಸಾಲ ವಂಚನೆ ಪ್ರಕರಣ: ಅನಿಲ್‌ ಅಂಬಾನಿಗೆ ಸೇರಿದ 50 ಕಂಪನಿಗಳ ಮೇಲೆ ಇಡಿ ದಾಳಿ

0 comments

Anil Ambani: ಯೆಸ್‌ ಬ್ಯಾಂಕ್‌ಗೆ 3000 ಕೋಟಿ ಸಾಲ ವಂಚನೆ ಪ್ರಕರಣಕ್ಕೆ ಕುರಿತಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಉದ್ಯಮಿ ಅನಿಲ್‌ ಅಂಬಾನಿ ಮಾಲೀಕತ್ವದ ರಿಲಯನ್ಸ್‌ ಗ್ರೂಪ್‌ಗೆ ಸೇರಿದ ಹಲವು ಕಂಪನಿಗಳ ಮೇಲೆ ದಾಳಿ ಮಾಡಿದೆ.

ರಿಲಯನ್ಸ್‌ ಅನಿಲ್‌ ಅಂಬಾನಿ ಗ್ರೂಪ್‌ (RAAGA) 50 ಕಂಪನಿಗಳ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಸುಮಾರು 35 ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಡಿ ದಾಳಿ ಮಾಡಿದೆ. ಈ ಕುರಿತು ರೆಡ್‌ಬಾಕ್ಸ್‌ ಗ್ಲೋಬಲ್‌ ಇಂಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿದೆ.

2017 ಮತ್ತು 2019 ರ ನಡುವೆ ಯೆಸ್ ಬ್ಯಾಂಕಿನಿಂದ 3000 ಕೋಟಿ ಸಾಲವನ್ನು ಪಡೆಯಲಾಗಿದ್ದು, ನಂತರ ಅದನ್ನು ಇತರ ಕಂಪನಿಗಳಿಗೆ ವರ್ಗಾಯಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದಷ್ಟೇ ಅಲ್ಲ, ಸಾಲವನ್ನು ಮಂಜೂರು ಮಾಡಲು ಯೆಸ್ ಬ್ಯಾಂಕಿನ ಅಧಿಕಾರಿಗಳು ಮತ್ತು ಪ್ರವರ್ತಕರಿಗೆ ಲಂಚ ನೀಡಿದ ಆರೋಪವೂ ಕೇಳಿ ಬಂದಿದೆ.

ಈ ಇಡೀ ಪ್ರಕರಣದಲ್ಲಿ ಇಂದು ದೇಶಾದ್ಯಂತ 48-50 ಸ್ಥಳಗಳಲ್ಲಿ ಕೇಂದ್ರ ತನಿಖಾ ಸಂಸ್ಥೆ ದಾಳಿ ನಡೆಸುತ್ತಿದೆ. RAAGA ಕಂಪನಿಗಳಿಗೆ ಸಾಲ ನೀಡುವಾಗ ಯೆಸ್ ಬ್ಯಾಂಕ್ ತನ್ನದೇ ಆದ ನಿಯಮಗಳನ್ನು ಉಲ್ಲಂಘಿಸಿದೆ ಎಂದು ED ತನ್ನ ತನಿಖೆಯಲ್ಲಿ ಕಂಡುಹಿಡಿದಿದೆ. ಸಾಲಕ್ಕೆ ಸಂಬಂಧಿಸಿದ ಎಲ್ಲಾ ಅಗತ್ಯ ದಾಖಲೆಗಳನ್ನು ಹಿಂದಿನ ದಿನಾಂಕದಂದು ಸಿದ್ಧಪಡಿಸಲಾಗಿತ್ತು.

ತನಿಖೆಯ ಪ್ರಕಾರ, ಯಾವುದೇ ಕ್ರೆಡಿಟ್ ವಿಶ್ಲೇಷಣೆ ಇಲ್ಲದೆ ಬೃಹತ್ ಹೂಡಿಕೆಗಳನ್ನು ಮಾಡಲಾಗಿದೆ. ಯಾವುದೇ ದಾಖಲೆಗಳಿಲ್ಲದೆ ಮತ್ತು ಸರಿಯಾದ ತನಿಖೆ ಇಲ್ಲದೆ ಸಾಲಗಳನ್ನು ನೀಡಲಾಗಿದೆ. ಅನೇಕ ಕಂಪನಿಗಳ ನಿರ್ದೇಶಕರು ಮತ್ತು ವಿಳಾಸಗಳು ಒಂದೇ ಆಗಿವೆ. ಸಾಲಗಳಿಗೆ ಅರ್ಜಿ ಸಲ್ಲಿಸಿ ಒಂದೇ ದಿನದಲ್ಲಿ ವಿತರಿಸಲಾಗಿದೆ. ಸಾಲ ಮಂಜೂರು ಮಾಡುವ ಮೊದಲೇ ಹಲವು ಬಾರಿ ಹಣವನ್ನು ವರ್ಗಾಯಿಸಲಾಗಿದೆ.

ಇದನ್ನೂ ಓದಿ: Bengaluru: ಆಂಧ್ರದಲ್ಲಿ ಬೆಂಗಳೂರಿನ ಇಬ್ಬರು ಬಿಜೆಪಿ ಮುಖಂಡರ ಹತ್ಯೆ!

You may also like