Home » Heart attack: ಸಾವಿರಾರು ಮಂದಿಗೆ ಯೋಗ ಕಲಿಸಿದ ಯೋಗಗುರು ಹೃದಯಾಘಾತದಿಂದ ಸಾವು – ಅಪಾರ ದುಖಃದಲ್ಲಿ ಸ್ನೇಹಿತರ ಬಳಗ

Heart attack: ಸಾವಿರಾರು ಮಂದಿಗೆ ಯೋಗ ಕಲಿಸಿದ ಯೋಗಗುರು ಹೃದಯಾಘಾತದಿಂದ ಸಾವು – ಅಪಾರ ದುಖಃದಲ್ಲಿ ಸ್ನೇಹಿತರ ಬಳಗ

0 comments

Heart attack: ಸಾವಿರಾರು ಜನರಿಗೆ ಯೋಗ ಕಲಿಸಿದ ಯೋಗ ಶಿಕ್ಷಕ ಹೃದಯಾಘಾತದಿಂದ ಸಾವನ್ನಪ್ಪಿದ ಆತಂಕದ ಘಟನೆ ಕೊಪ್ಪಳ ತಾಲೂಕಿನ ಬಹದ್ದೂರ ಬಂಡಿ ಗ್ರಾಮದಲ್ಲಿ ನಡೆದಿದೆ. ಯೋಗ ಶಿಕ್ಷಕ ಶಾಂತವೀರ ಸ್ವಾಮಿ ಸಾವಿನಿಂದ ಯೋಗ ಶಿಕ್ಷಕರ ಬಳಿ ಯೋಗ ಕಲಿತ ಅನೇಕರು ಭಾವುಕರಾಗಿದ್ದಾರೆ.

ಸಾವಿರಾರು ಜನರಿಗೆ ಯೋಗ ಕಲಿಸುತ್ತಿದ್ದ ಶಾಂತವೀರ‌ದಸ್ವಾಮಿ ಸಾವಿನಿಂದ ಅವರ ಊರು ಬಹದ್ದೂರ ಬಂಡಿಯ ಜನ ಶಿಕ್ಷಕನನ್ನ ಕಳೆದುಕೊಂಡು ನೀರವ ಮೌನಕ್ಕೆ ಜಾರಿದ್ದಾರೆ. ತಮ್ಮ 57 ವರ್ಷಗಳಲ್ಲಿ ಶಾಂತವೀರಸ್ವಾಮಿ ಒಂದು ಮೊಟ್ಟೆ ಕೂಡಾ ತಿನ್ನದ ಯೋಗಗುರು, ಗ್ರಾಮಕ್ಕೆ ಬಂದಾಗ ಎಲ್ಲರಿಗೂ ಆರೋಗ್ಯದ ಪಾಠ ಮಾಡತಿದ್ದರು. ಕಳೆದ ಹದಿನೈದು ದಿನಗಳ ಹಿಂದೆ ಗ್ರಾಮದ ಜಾತ್ರೆಯಲ್ಲಿ ಭಾಗಿಯಾಗಿದ್ದ ಶಾಂತವೀರ ಸ್ವಾಮಿ ಅವರನ್ನು ನೆನೆದು ಸ್ನೇಹಿತರು ಭಾವುಕರಾಗಿದ್ದಾರೆ.

ಇಂದು ಬೆಳಗಿನ ಜಾವ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಶಾಂತವೀರ ಸ್ವಾಮಿ ಸಾವನ್ನಪ್ಪಿದ್ದಾರೆ. ಸಾವಿರಾರು ಜನರ ಆರೋಗ್ಯ ಕಾಪಾಡಿದವರಿಗೆ ಹೀಗೆ ಆಗಿದೆ ಅಂದ್ರೆ ನಂಬೋಕೆ ಆಗತಿಲ್ಲ ಎಂದು ಸ್ನೇಹಿತರು ನೋವು ತೋಡಿಕೊಂಡಿದ್ದಾರೆ. ಯೋಗ ಕಲಿತವರು‌ ಅವರು ನಮ್ಮ ಪಾಲಿಗೆ ಆರೋಗ್ಯ ಕೊಟ್ಟ ದೇವರಾಗಿದ್ರು ಎಂದು ಭಾವುಕರಾದರು.

ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳ ಅವಧಿಯಲ್ಲಿ ಒಟ್ಟು ನಾಲ್ಕು ಜನ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕೊಪ್ಪಳ ನಿವಾಸಿ‌ 26 ವರ್ಷದ ಮಂಜುಳಾ, ಗಂಗಾವತಿ ತಾಲೂಕಿನ ದಾಸನಾಳ ನಿವಾಸಿ 24 ವರ್ಷದ ಅಬ್ದುಲ್, ಕೊಪ್ಪಳ ತಾಲೂಕಿನ‌ ಬಹದ್ದೂರ ಬಂಡಿ ನಿವಾಸಿ ಶಾಂತವೀರ ಸ್ವಾಮಿ ಹಾಗೂ ಕೊಪ್ಪಳ ತಾಲೂಕಿನ ಅಗಳಕೇರಾ ಗ್ರಾಮದ 65 ವರ್ಷದ ದೇವಮ್ಮ ಪತಿ ತೀರಿದ ಐದು ದಿನದ ಬಳಿಕ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಇದನ್ನೂ ಓದಿ: Government employees: ಸರ್ಕಾರಿ ನೌಕರರ ಸೇವಾ ಅವಧಿ ವಿಸ್ತರಣೆ!

You may also like