Home » Punith Kerehalli: ‘ಮುಂದಿನ ಬಲಿ ನೀನೆ’ – ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ ಬೆದರಿಕೆ

Punith Kerehalli: ‘ಮುಂದಿನ ಬಲಿ ನೀನೆ’ – ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ ಬೆದರಿಕೆ

0 comments

Punith Kerehalli: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಮಾಸುವ ಮುನ್ನವೇ ಇದೀಗ ಹಿಂದುತ್ವದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿರುವ ಪುನೀತ್ ಕೆರೆ ಹಳ್ಳಿಯವರಿಗೆ ‘ಮುಂದಿನ ಬಲಿ ನೀನೇ’ ಎಂದು ಜೀವ ಬೆದರಿಕೆ ಎಂದು ಬಂದಿದೆ.

ಹೌದು, ಇದ್ರಿಷ್ ಪಾಷಾ ಕೊಲೆಗೆ ಪ್ರತೀಕಾರವಾಗಿ ಪುನೀತ್ ಕೆರೆಹಳ್ಳಿಯನ್ನು ಕೊಲೆ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ next you will kill ಎಂದು ಮೈಸೂರಿನ ಉದಯಗಿರಿ ನಿವಾಸಿ ಅಕ್ರಮ್ ಖಾನ್ ಎಂಬ ಆರೋಪಿ ಪೋಸ್ಟ್ ಮಾಡಿದ್ದಲ್ಲದೆ, ವಾಟ್ಸ್ ಅಪ್ ಮೂಲಕ ನಿರಂತರ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ.

ಇದೀಗ ಆರೋಪಿಯ ವಿರುದ್ಧ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

You may also like