Pakistan : ಭಾರತದಲ್ಲಿ LPG ಸಿಲೆಂಡರ್ ಬೆಲೆ ಪ್ರತಿ ತಿಂಗಳು ಏರಿಕೆಯಾಗುವುದು ಇಳಿಕೆಯಾಗುವುದು ನಡೆಯುತ್ತಲೇ ಇದೆ. ಇತ್ತೀಚಿಗಷ್ಟೇ ಸಿಲಿಂಡರ್ ಬೆಲೆಯಲ್ಲಿ ಕೇಂದ್ರ ಸರ್ಕಾರವು 50ರೂ ಏರಿಕೆ ಮಾಡಿತ್ತು. ಏನೇ ಆದರೂ ಭಾರತದಲ್ಲಿ ಸಿಲಿಂಡರ್ ಬೆಲೆ ಸಾವಿರ ರೂ ಗಡಿ ದಾಟಿ ಹೋಗುತ್ತಿಲ್ಲ. ಮುಂದೆ ಬಹುಶಃ ಹೋಗುವುದು ಕೂಡ ಇಲ್ಲ. ಆದರೆ ನೀವು ಪಾಕಿಸ್ತಾನದಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ಕೇಳಿದರೆ ಬೆಚ್ಚಿ ಬೀಳುತ್ತೀರಿ.
ʼಎಬಿಪಿ ನ್ಯೂಸ್ʼ ವರದಿಯ ಪ್ರಕಾರ, ಪಾಕಿಸ್ತಾನದಲ್ಲಿ ಒಂದು ಗ್ಯಾಸ್ ಸಿಲಿಂಡರ್‌ನ ಬೆಲೆ 3000 ರಿಂದ 3500 ರೂಪಾಯಿಗಳವರೆಗೆ ಇದೆ. ಹೌದು, ಭಾರತದಲ್ಲಿ, ಒಂದು ಪ್ರಮಾಣಿತ ಎಲ್‌ಪಿಜಿ ಸಿಲಿಂಡರ್ 14.2 ಕಿಲೋಗ್ರಾಂ ತೂಕವನ್ನು ಹೊಂದಿರುತ್ತದೆ. ಈ ತೂಕದ ಆಧಾರದ ಮೇಲೆ ಲೆಕ್ಕಾಚಾರ ಮಾಡಿದರೆ, ಅದೇ ಗಾತ್ರದ ಸಿಲಿಂಡರ್‌ಗೆ ಪಾಕಿಸ್ತಾನದಲ್ಲಿ ಸುಮಾರು 3,519 ರೂಪಾಯಿಗಳ ಬೆಲೆ ಇರುತ್ತದೆ. ಏತನ್ಮಧ್ಯೆ, ನೆರೆಯ ರಾಷ್ಟ್ರದಲ್ಲಿ, 45.4 ಕೆಜಿ ತೂಕದ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆ 11,251.16 ರೂಪಾಯಿಗಳೆಂದು ʼಎಬಿಪಿ ನ್ಯೂಸ್ʼ ವರದಿ ಮಾಡಿದೆ.
