Home » ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ ಯುವತಿ | ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ ಪರಾರಿ.!

ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ ಯುವತಿ | ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ ಪರಾರಿ.!

0 comments

19 ವರ್ಷದ ಯುವತಿಯೋರ್ವಳು ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದು ಆದರೆ ಮಗುವಿಗೆ ಜನ್ಮ ನೀಡಿ, ಬಳಿಕ ಶೌಚಾಲಯದ ಬಳಿ ಮಗು ಇಟ್ಟು ಪರಾರಿಯಾಗಿರುವ ಘಟನೆ ನಡೆದಿದೆ. ಪೊಲೀಸರು ಆಕೆಯನ್ನು ಪತ್ತೆ ಹಚ್ಚಿರುವ ಘಟನೆ ಕೂಡಾ ನಡೆದಿದೆ.

ಈ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಮಗುವಿಗೆ ಜನ್ಮ ನೀಡಿ, ನಂತರ ಶೌಚಾಲಯದ ಬಳಿ ಮಗು ಇಟ್ಟು ಹೋಗಿದ್ದಳು. ಆದರೆ ಮಗು ಅಳುವ ಶಬ್ದ ಕೇಳಿದ ಸಿಬ್ಬಂದಿ ನಂತರ ರಕ್ಷಿಸಿ ಆಸ್ಪತ್ರೆ ಅಧೀಕ್ಷಕರ ಗಮನಕ್ಕೆ ತಂದಿದ್ದರು.

ಅನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಯುವತಿ ಪತ್ತೆಯಾಗಿದ್ದಾಳೆ. ಆಕೆಯನ್ನು ಕರೆತಂದು ವಿಚಾರಿಸಿದಾಗ ಮೊದಲಿಗೆ ಆ ಮಗು ತನ್ನದಲ್ಲ ಎಂದು ಹೇಳಿದ್ದಾಳೆ. ನಂತರ ಒಪ್ಪಿಕೊಂಡಿದ್ದಾಳೆ. ಅಲ್ಲದೆ ತಾನು ಕುಟುಂಬಸ್ಥರಿಗೆ ತಿಳಿಸದೆ ಈಗಾಗಲೇ ಮದುವೆಯಾಗಿದ್ದು, ಇದರಿಂದ ಮಗು ಜನಿಸಿದೆ. ಆದರೆ ಕುಟುಂಬದವರ ಭಯದಿಂದ ಈ ಕೃತ್ಯ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ. ಇದೀಗ ಅಕೆಗೆ ಕೌನ್ಸೆಲಿಂಗ್ ಮಾಡಿ ತಾಯಿ ಮತ್ತು ಮಗುವನ್ನು ಸೇರಿಸಿದ್ದಾರೆ.

You may also like

Leave a Comment