Home » Viral Video : ಜಲಪಾತದ ತುದಿಯಲ್ಲಿ ನಿಂತು ಗೆಳತಿಗೆ ಪ್ರಪೋಸ್ – ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋದ ಯುವಕ !!

Viral Video : ಜಲಪಾತದ ತುದಿಯಲ್ಲಿ ನಿಂತು ಗೆಳತಿಗೆ ಪ್ರಪೋಸ್ – ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋದ ಯುವಕ !!

by V R
0 comments

Viral Video : ತನ್ನ ಕನಸಿನ ಗೆಳತಿಗೆ ಜಲಪಾತದ ತುದಿಯಲ್ಲಿ ನಿಂತು ಪ್ರಪೋಸ್ ಮಾಡುತ್ತಿದ್ದ ಯುವಕನು ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋದಂತಹ ಮನ ಮಿಡಿಯುವ ಘಟನೆಯೊಂದು ನಡೆದಿದೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ವೈರಲ್ ಆಗುತ್ತಿದೆ.

ವೈರಲ್ ಆದ ವೀಡಿಯೊದಲ್ಲಿ, ಒಬ್ಬ ಯುವಕ ತನ್ನ ಗೆಳತಿಗೆ ಪ್ರಪೋಸ್ ಮಾಡುವುದನ್ನು ಮತ್ತು ಅದಕ್ಕಾಗಿ ಜಲಪಾತದ ಮಧ್ಯದಲ್ಲಿರುವ ಬಂಡೆಗಳ ಮೇಲೆ ನಿಂತಿರುವುದನ್ನು ನೀವು ನೋಡಬಹುದು. ಈ ಸಮಯದಲ್ಲಿ, ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದ ಹುಡುಗಿಗೆ ಹುಡುಗ ಪ್ರಪೋಸ್ ಮಾಡಲು ಪ್ರಯತ್ನಿಸುತ್ತಾನೆ.

ನಂತರ ಹುಡುಗ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಲು ಮೊಣಕಾಲುಗಳ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಅಲ್ಲಿ ವಿಧಿಯಾಟವೇ ಬೇರೆ ಇತ್ತು. ಯಾಕೆಂದರೆ ಇದ್ದಕ್ಕಿದ್ದಂತೆ ಅವನ ಕಾಲು ಜಾರಿ ಅವನು ವೇಗವಾಗಿ ಹರಿಯುವ ಜಲಪಾತಕ್ಕೆ ಬಿದ್ದು ಕೊಚ್ಚಿ ಹೋಗುತ್ತಾನೆ. ಹತ್ತಿರದಲ್ಲಿ ನಿಂತಿದ್ದ ಅವನ ಗೆಳತಿ ಅವನನ್ನು ಉಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಲ್ಲ. ಆತ ವೇಗದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದನು.ಗೆಳತಿ ಏನು ಮಾಡಲು ಸಾಧ್ಯವಾಗದೇ ಮೌನವಾಗಿ ನೋಡುತ್ತಲೇ ಇದ್ದಳು ಎಂದು ವೀಡಿಯೊದಲ್ಲಿ ಕಾಣಬಹುದು.

ಈ ವಿಡಿಯೋವನ್ನು @MarchUnofficial ಎಂಬ ಖಾತೆಯು ಇನ್‌ಸ್ಟಾದಲ್ಲಿ ಹಂಚಿಕೊಂಡಿದೆ. ಸಾವಿರಾರು ಜನರು ಇದನ್ನು ನೋಡಿದ್ದಾರೆ. ಅಲ್ಲದೆ ಬಗೆಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Priyanka Kharge: ಔಟ್ ಡೇಟೆಡ್ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇರುವುದಿಲ್ಲ – ಪ್ರತಾಪ್ ಸಿಂಹ ವಿರುದ್ಧ ಪ್ರಿಯಾಂಕ ಖರ್ಗೆ

You may also like