Home » Ullala: ಕಳೆದು ಹೋದ 2.5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಮರಳಿ ನೀಡಿದ ಯುವಕ; ಮಾಲಕರಿಂದ ನಗದು ಗೌರವ

Ullala: ಕಳೆದು ಹೋದ 2.5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಮರಳಿ ನೀಡಿದ ಯುವಕ; ಮಾಲಕರಿಂದ ನಗದು ಗೌರವ

0 comments

Ullala: ಮದುವೆ ನಿಶ್ಚಿತಾರ್ಥ ಕಾರ್ಯಕ್ರಮವೊಂದರಲ್ಲಿ ಸಿಕ್ಕಿದ್ದ 2.5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಾಪಾಸು ಅದರ ಮಾಲಕರಿಗೆ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದ ಯುವಕನನ್ನು ಶ್ಲಾಘಿಸಲಾಗಿದೆ. ಕುಂಬಳೆ ಸಮೀಪದ ಪುತ್ತಿಗೆಯ ಪಂಜಳ ನಿವಾಸಿ ವಿಜಯಕುಮಾರ್‌ ರೈ ಅವರು ಚಿನ್ನಾಭರಣ ವಾಪಾಸು ನೀಡಿದ್ದು, ಇದರಿಂದ ಚಿನ್ನಾಭರಣ ಪಡೆದ ಮಾಲಕರು ಕಾರ್ಯಕ್ರಮವೊಂದರಲ್ಲಿ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.

ಸಿಕ್ಕಿದ್ದ ಚಿನ್ನಾಭರಣವನ್ನು ಹಿಡಿದುಕೊಂಡು ತುಂಬಾ ಹೊತ್ತು ಕಾದು ಕುಳಿತಿದ್ದಾಗ, ತನ್ನ ಮಗುವಿನ ಆಭರಣ ಕಳೆದುಕೊಂಡು ಹುಡುಕಾಟ ಮಾಡುತ್ತಾ ಬಂದ ಕಿರಣ್‌ ಶೆಟ್ಟಿ ಅವರು ನಿಶ್ಚಿತಾರ್ಥ ನಡೆದ ಸ್ಥಳಕ್ಕೆ ಬಂದಿದ್ದಾರೆ. ನಿರೀಕ್ಷೆಯಂತೆ ಕಾದು ಕುಳಿತ್ತಿದ್ದ ವಿಜಯ ಕುಮಾರ್‌ ರೈ ಅವರು ಕಿರಣ್‌ ಶೆಟ್ಟಿ ಅವರನ್ನು ವಿಚಾರಿಸಿದ್ದಾರೆ. ಆಗ ಚಿನ್ನ ಕಳೆದುಕೊಂಡ ಕುರಿತು ಹೇಳಿದ್ದಾರೆ, ನಂತರ ಚಿನ್ನದ ಗುರುತನ್ನು ಕೇಳಿ ಅವರಿಗೆ ಹಸ್ತಾಂತರ ಮಾಡಿದ್ದಾರೆ.

ಅನಂತರ ಕಿರಣ್‌ ಶೆಟ್ಟಿ ಅವರು ವಿಜಯಕುಮಾರ್‌ ರೈ ಅವರ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು ಹೋಗಿದ್ದಾರೆ. ನಂತರ ತಾನು ಮಾರ್ಗದರ್ಶಕರಾಗಿರುವ ತಲಪಾಡಿ ಸಮೀಪದ ಕಿನ್ಯ ದುರ್ಗಾಪುರದ ಯುವಶಕ್ತಿಯ ಕಾರ್ಯಕ್ರಮದಲ್ಲಿ ವಿಜಯಕುಮಾರ್‌ ರೈ ಅವರನ್ನು ನಗದು ಸಹಿತ ಸನ್ಮಾನ ಮಾಡಿ ಗೌರವಿಸಿದ್ದಾರೆ.

You may also like