Home » Mandya: ಯುವತಿಗೆ 4 ವರ್ಷದಿಂದ ನಿರಂತರ ಕಿರುಕುಳ: ಹಿಂದೂ ಮುಖಂಡನ ವಿರುದ್ಧ ಎಫ್‌ಐಆರ್ ‌

Mandya: ಯುವತಿಗೆ 4 ವರ್ಷದಿಂದ ನಿರಂತರ ಕಿರುಕುಳ: ಹಿಂದೂ ಮುಖಂಡನ ವಿರುದ್ಧ ಎಫ್‌ಐಆರ್ ‌

by Mallika
0 comments

Mandya: ಮದುವೆಯಾಗಲು ಒಪ್ಪದ ಯುವತಿಯ ಬೆನ್ನುಬಿದ್ದ ಹಿಂದೂ ಮುಖಂಡನೋರ್ವ ನಾಲ್ಕು ವರ್ಷಗಳಿಂದ ಆಕೆಗೆ ಕಿರುಕುಳ ನೀಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಆಕೆಗೆ ನಿಶ್ಚಯವಾಗುತ್ತಿದ್ದ ಮದುವೆಯನ್ನೆಲ್ಲ ರದ್ದು ಮಾಡಿದ್ದು ಮಾತ್ರವಲ್ಲದೇ, ಆಸಿಡ್‌ ದಾಳಿ ಮಾಡುವ ಬೆದರಿಕೆಯೊಡ್ಡಿದ್ದು ಆರೋಪದಲ್ಲಿ ಆತನ ವಿರುದ್ಧ ಮಂಡ್ಯದ ಕೆರಗೋಡು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಹಿಂದೂ ಮುಖಂಡ ಚಿಕ್ಕಬಳ್ಳಿ ಬಾಲಕೃಷ್ಣ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಾಗಿದೆ.

ಬಾಲಕೃಷ್ಣಗೆ ಹಾಗೂ ಸಂತ್ರಸ್ತೆಗೆ ನಾಲ್ಕು ವರ್ಷಗಳ ಹಿಂದೆ ಮದುವೆ ನಿಶ್ಚಯವಾಗಿತ್ತು. ಈ ಸಂದರ್ಭದಲ್ಲಿ ಬಾಲಕೃಷ್ಣ ಜೊತೆಗೆ ಸಂತ್ರಸ್ತೆ ಫೊಟೋ ತೆಗೆಸಿಕೊಂಡಿದ್ದಾನೆ. ಮದುವೆಯಾಗಲು ಬಾಲಕೃಷ್ಣ ತುಂಬಾ ಸುಳ್ಳುಗಳನ್ನು ಹೇಳಿ ಮದುವೆ ನಿಶ್ಚಯ ಮಾಡಿಕೊಂಡಿದ್ದು, ಇದು ಸಂತ್ರಸ್ತೆಗೆ ನಂತರ ತಿಳಿದಿದೆ. ಹೀಗಾಗಿ ಮದುವೆಯಾಗಲು ಯುವತಿ ನಿರಾಕರಿಸಿದ್ದಾಳೆ. ಇದು ಬಾಲಕೃಷ್ಣನನ್ನು ಸಿಟ್ಟುಗೊಳ್ಳುವಂತೆ ಮಾಡಿದೆ.

ಯುವತಿಗೆ ಹಲವು ಮದುವೆ ಪ್ರಸ್ತಾಪಗಳು ಬಂದಿದ್ದು, ಆದರೆ ಬಾಲಕೃಷ್ಣ ಹಳೇ ಫೋಟೋ ತೋರಿಸಿ ಚಾಡಿ ಹೇಳಿ ವಿವಾಹ ರದ್ದು ಮಾಡಿಸುತ್ತಿದ್ದ. ಜೊತೆಗೆ ಬೆದರಿಕೆ, ಆಸಿಡ್‌ ಎರಚುವುದು ಎನ್ನುವ ಹೇಳಿಕೆಯಿಂದ ಬೇಸತ್ತ ಯುವತಿ ಬಾಲಕೃಷ್ಣನಿಂದ ರಕ್ಷಣೆ ಕೋರಿ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂತ್ರಸ್ತೆ ಮನವಿ ಮಾಡಿದ್ದಾರೆ.

You may also like