Home » Karavara : ಬಸ್ಸಲ್ಲಿ ನಿದ್ರೆಗೆ ಜಾರಿದ ಯುವತಿ – ಎದೆಗೆ ಕೈ ಹಾಕಿದ ಕಾಮುಕ, ವಿಡಿಯೋ ವೈರಲ್

Karavara : ಬಸ್ಸಲ್ಲಿ ನಿದ್ರೆಗೆ ಜಾರಿದ ಯುವತಿ – ಎದೆಗೆ ಕೈ ಹಾಕಿದ ಕಾಮುಕ, ವಿಡಿಯೋ ವೈರಲ್

0 comments

Karavara : ಇತ್ತೀಚಿನ ದಿನಗಳಲ್ಲಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ಹೆಚ್ಚಾಗಿದೆ. ಈ ಕುರಿತಾಗಿ ಸಾಕಷ್ಟು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನಾವು ಕಾಣಬಹುದು. ಇದೀಗ ಯುವತಿ ಒಬ್ಬಳು ಬಸ್ನಲ್ಲಿ ಪ್ರಯಾಣಿಸುವಾಗ ನಿದ್ದೆಗೆ ಜಾರಿದ ಸಮಯದಲ್ಲಿ ಪಕ್ಕದಲ್ಲಿ ಕುಳಿತಿದ್ದ ಕಾಮುಕನೊಬ್ಬ ಆಕೆಯ ಎದೆಗೆ ಕೈ ಹಾಕಿದ್ದಾನೆ.

ಹೌದು, ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ ಮಾಡಿರುವ ಘಟನೆ ಕಾರವಾರದಲ್ಲಿ ನಡೆದ್ದು, ಯುವತಿ ಬಸ್​​​​​​ನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಪಕ್ಕದಲ್ಲಿ ಕುಳಿತ ಯುವಕ ಎದೆ ಮೇಲೆ ಕೈ ಇಟ್ಟು ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿ ನಿದ್ದೆಯಿಂದ ಎಚ್ಚರಗೊಂಡು ನೋಡಿದಾಗ, ಕೈ ಆಕೆಯ ಎದೆ ಮೇಲಿತ್ತು. ಈ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾಳೆ. ಇನ್ನು ಯುವಕನಿಗೆ ಅವಾಚ್ಯ ಶಬ್ದಗಳಿಂದ ಉಗಿದು, ಧರ್ಮದೇಟು ನೀಡಿದ್ದಾಳೆ. ಈ ವಿಡಿಯೋ ಪೊಲೀಸರಿಗೂ ಟ್ಯಾಗ್​ ಮಾಡಿದ್ದಾಳೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ದೀಪನ್ ಎಂ.ಎನ್. ಅವರು ತಕ್ಷಣ ಕ್ರಮಕ್ಕೆ ಮುಂದಾಗಿದ್ದಾರೆ. ಪ್ರಕರಣದ ತನಿಖೆ ನಡೆಸಿ, ಕೂಡಲೇ ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುವಂತೆ ಅಂಕೋಲಾ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

https://twitter.com/i/status/2006296900446879944

You may also like