Marriage: ಒಂದು ದೇಶದ ಯುವಕ/ಯುವತಿ ಇನ್ನೊಂದು ದೇಶದ ಯುವತಿ/ಯುವಕನನ್ನ ಮದುವೆಯಾಗುವುದು (Marriage) ಹೊಸದಲ್ಲ. ಆದ್ರೆ ಇದೀಗ ಹೊರಬಿದ್ದಿರುವ ತಾಜಾ ವಿಷಯ ಏನೆಂದ್ರೆ ಈ ಮುಸ್ಲಿಂ ದೇಶದ ಯುವತಿಯರು ಭಾರತದ ಯುವಕರನ್ನೇ ಮದುವೆಯಾಗಬೇಕು ಎಂದು ತುದಿಗಾಲಿನಲ್ಲಿ ನಿಲ್ಲುತ್ತಿದ್ದಾರಂತೆ. ಅಷ್ಟಕ್ಕೂ ಆ ಮುಸ್ಲಿಂ ದೇಶ ಯಾವುದು? ಅಂತಾ ನೋಡೋಣ ಬನ್ನಿ.
ನಾವಿಲ್ಲಿ ಹೇಳ್ತಿರೋದು ಬಾಂಗ್ಲಾದೇಶದ ಯುವತಿಯರ ಬಗ್ಗೆ. ಭಾರತೀಯ ಪುರುಷರನ್ನು ಮದುವೆಯಾಗಲು ಕಾನೂನು ಅನುಮತಿ ಕೇಳಿ ಅರ್ಜಿ ಸಲ್ಲಿಸುತ್ತಿರುವ ಬಾಂಗ್ಲಾದೇಶದ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ ಎಂದು 2024ರ ವರದಿಯೊಂದು ತಿಳಿಸಿದೆ.
2024ರ ಡಿಸೆಂಬರ್ 20ರ ವರದಿ ಪ್ರಕಾರ, ಬಾಂಗ್ಲಾದೇಶದ 100 ಮಹಿಳೆಯರು ಭಾರತೀಯ ಪುರುಷರನ್ನ ಮದುವೆಯಾಗಲು ಕಾನೂನು ಅನುಮತಿ ಕೇಳಿದ್ದಾರೆ. ಆದರೆ ಬಾಂಗ್ಲಾದೇಶದ 11 ಪುರುಷರು ಮಾತ್ರ ಭಾರತದ ಮಹಿಳೆಯನ್ನ ವಿವಾಹ ಆಗಲು ಕಾನೂನು ಒಪ್ಪಿಗೆ ಕೇಳಿದ್ದಾರೆ. ಅಂದಹಾಗೇ, ಭಾರತೀಯ ಪುರುಷರನ್ನ ವಿವಾಹವಾಗಲು ಅನುಮತಿ ಕೇಳಿ ಅರ್ಜಿ ಸಲ್ಲಿಸಿದ ಮಹಿಳೆಯರ ಸಂಖ್ಯೆ 2023ರಲ್ಲಿ ಕೇವಲ 44 ಆಗಿತ್ತು. ಕಳೆದ 5 ವರ್ಷಗಳಲ್ಲಿ ಹೀಗೆ ಭಾರತೀಯ ಪುರುಷರನ್ನ ವಿವಾಹವಾಗಲು ಆಸೆಪಟ್ಟ ಬಾಂಗ್ಲಾದೇಶಿ ಯುವತಿಯರ ಸಂಖ್ಯೆ 450.
ಭಾರತೀಯ ಪುರುಷರೇ ಯಾಕೆ ಬೇಕು?
ಬಾಂಗ್ಲಾದೇಶದ ಯುವತಿಯರು ಭಾರತೀಯ ಪುರುಷರನ್ನೇ ಮದುವೆಯಾಗಲು ಯಾಕೆ ಅಷ್ಟೊಂದು ಆಸೆ ಪಡುತ್ತಾರೆ ಎಂಬುದಕ್ಕೆ ಯಾವುದೇ ಕಾರಣವೂ ಇಲ್ಲ. ಭಾರತದಲ್ಲಿರುವ ಅನುಕೂಲ ಅವರನ್ನ ಇಲ್ಲಿಗೆ ಸೆಳೆಯಬಹುದು. ಇಲ್ಲಿನ ನಾಗರಿಕತ್ವ ಪಡೆಯುವುದೇ ಉದ್ದೇಶವಾಗಿರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಯಾವುದೇ ದೇಶದ ಯುವತಿಯರು ಭಾರತೀಯ ಯುವಕನನ್ನ ಮದುವೆಯಾಗಿ ಇಲ್ಲಿಗೆ ಬಂದು 7 ವರ್ಷ ನೆಲೆಸಿದರೆ ಅವರಿಗೆ ಭಾರತದ ಪೌರತ್ವ ಸಿಗುತ್ತದೆ. ಈಗಂತೂ ಬಾಂಗ್ಲಾದೇಶದ ಪರಿಸ್ಥಿತಿ ಹದಗೆಟ್ಟಿದೆ. ಆರ್ಥಿಕವಾಗಿಯೂ ಆ ದೇಶ ಸಂಕಷ್ಟದಲ್ಲಿದೆ. ಹೀಗಾಗಿ ಅಲ್ಲಿನ ಯುವತಿಯರು ತಮ್ಮ ಬದುಕು-ಭವಿಷ್ಯದ ದೃಷ್ಟಿಯಿಂದ ಭಾರತದತ್ತ ಹೆಚ್ಚೆಚ್ಚು ಆಕರ್ಷಿತರಾಗಿಬಹುದು ಎನ್ನಲಾಗಿದೆ.
