Home » ಕಬಡ್ಡಿ ಆಡುವಾಗಲೇ ಕುಸಿದು ಸಾವು ಕಂಡ ಆಟಗಾರ| ಗೆದ್ದ ಕಪ್ ನೊಂದಿಗೆ ಅಂತ್ಯಸಂಸ್ಕಾರ

ಕಬಡ್ಡಿ ಆಡುವಾಗಲೇ ಕುಸಿದು ಸಾವು ಕಂಡ ಆಟಗಾರ| ಗೆದ್ದ ಕಪ್ ನೊಂದಿಗೆ ಅಂತ್ಯಸಂಸ್ಕಾರ

0 comments

ಕಬಡ್ಡಿ ಆಡುತ್ತಿದ್ದ ಸಂದರ್ಭದಲ್ಲಿ ಆಟಗಾರನೋರ್ವನು ಕೆಳಗೆ ಕುಸಿದು ಬಿದ್ದು ಮೃತಪಟ್ಟಿರುವ ಘಟನೆಯೂ ನಡೆದಿದೆ. ಈ ಘಟನೆಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಬಡ್ಡಿ ಆಟಗಾರ ವಿಮಲ್ ಮೃತ ದುರ್ದೈವಿ. ನಿನ್ನೆ ಕಡಲೂರಿನ ಕಡಂಪುಲಿಯೂರಿನಲ್ಲಿ ನಡೆದ ರಾಜ್ಯ ಕಬಡ್ಡಿ ಸ್ಪರ್ಧೆಯಲ್ಲಿ ಈ ಘಟನೆ ನಡೆದಿದೆ. ಪಂದ್ಯದ ವೇಳೆ ಎದುರಾಳಿ ತಂಡದ ಸದಸ್ಯರು ವಿಮಲ್ ಅವರನ್ನು ಟ್ಯಾಕಲ್ ಮಾಡುತ್ತಿದ್ದ ಸಂದರ್ಭದಲ್ಲಿ ವಿಮಲ್ ನೆಲದ ಮೇಲೆ ಕುಸಿದು ಬಿದ್ದಿದ್ದು, ನಂತರ ಮೇಲಕ್ಕೆ ಏಳಲು ಯತ್ನಿಸಿದರೂ ಎದ್ದು ನಿಲ್ಲಲಾಗದೇ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಇನ್ನೂ ವೀಡಿಯೋದಲ್ಲಿ ಕಂಡು ಬರುತ್ತಿರುವಂತೆ ಸಹ ಆಟಗಾರನ ಮಂಡಿ ವಿಮಲ್ ನ ಎದೆಗೆ ಬಡಿದಿದ್ದು, ಇದರಿಂದ ಅವರು ಗಂಭೀರಗೊಂಡರೇ ಎನ್ನುವ ಅನುಮಾನಗಳು ಕೂಡ ಕೇಳಿ ಬಂದಿವೆ.

ಘಟನೆ ಸಂಬಂಧ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಪೋಸ್ಟ್ ಮಾರ್ಟಮ್ ವರದಿ ಬಂದ ಬಳಿಕ ಸಾವಿನ ಅಸಲಿ ಕಾರಣ ಬಯಲಾಗಬೇಕಿದೆ.

ಇನ್ನು ಮೃತದೇಹದ ಅಂತ್ಯಸಂಸ್ಕಾರದ‌ ವೇಳೆ ಟ್ರೋಫಿ ಇಟ್ಟು ಅಂತ್ಯಸಂಸ್ಕಾರ ಮಾಡಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

You may also like

Leave a Comment