4
Dharmasthala: ನೇತ್ರಾವತಿ-ಪಾಂಗಾಳ ರಸ್ತೆಯ ಸಮೀಪ ಮೂವರು ಯೂಟ್ಯೂಬರ್ಸ್ ಮೇಲೆ ಇಂದು (ಆಗಸ್ಟ್ 6) ರಂದು ಕಿಡಿಗೇಡಿಗಳು ಹಲ್ಲೆ ಮಾಡಿರುವ ಕುರಿತು ವರದಿಯಾಗಿದೆ.
ಕುಡ್ಲ ರ‍್ಯಾಂಪೇಜ್ ಎಂಬ ಹೆಸರಿನ ಯೂಟ್ಯೂಬರ್ ಆಗಿರುವ ಅಜಯ್ ಅಂಚನ್ ಅವರನ್ನು ಧರ್ಮಸ್ಥಳದಲ್ಲಿ ಎಸ್‌ಐಟಿ ಕಾರ್ಯಾಚರಣೆಯನ್ನು ವರದಿ ಮಾಡಲು ತೆರಳಿದ್ದಾಗ ಇಂದು ದಾಳಿ ಮಾಡಿ ಹೊಡೆದಿದ್ದಾರೆ ಎಂದು ವರದಿಯಾಗಿದೆ.
ಅಜಯ್ ಅಂಚನ್ ಅವರ ಜೊತೆಗೆ, ಯುನೈಟೆಡ್ ಮೀಡಿಯಾದ ಅಭಿಷೇಕ್, ಸಂಚಾರಿ ಸ್ಟುಡಿಯೋದ ವಿಜಯ್ ಮತ್ತು ಕುಡ್ಲಾ ರಾಂಪೇಜ್‌ನ ಕ್ಯಾಮೆರಾ ಪರ್ಸನ್ ಇಷ್ಟು ಜನರ ಮೇಲೆ ದಾಳಿ ಮಾಡಲಾಗಿದೆ. ಕ್ಯಾಮೆರಾವನ್ನು ಪುಡಿ ಮಾಡಿದ್ದಾರೆ ಮತ್ತು ಎಲ್ಲರೂ ಈ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದು ಒಬ್ಬರಿಗೆ ತೀವ್ರ ಗಾಯಗಳಾಗಿವೆ ಎನ್ನಲಾಗಿದೆ.
