ಡಾ.ರಾಜ್ ಕುಮಾರ್ ಕುಟುಂಬದ ಕುಡಿ, ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಮಗ ಯುವರಾಜ್ (ಗುರುರಾಜ್ ಕುಮಾರ್) ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಈ ಮೂಲಕ ತಮ್ಮ ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ಯುವ ಅವರು ವಿಚ್ಛೇದನದ ನೋಟಿಸ್ ಕಳುಹಿಸಿದ್ದಾರೆ.
ತಮ್ಮ ವಿಚ್ಛೇದನಕ್ಕೆ ಅಗೌರವ ಹಾಗೂ ಮಾನಸಿಕ ಕ್ರೌರ್ಯ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣದ ಕುರಿತು ಜುಲೈ 4 ರಂದು ಫ್ಯಾಮಿಲಿ ಕೋರ್ಟಿನಲ್ಲಿ ವಿಚಾರಣೆ ನಡೆಯಲಿದೆ. ಜೂನ್ 6 ರಂದು ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಛೇದನಕ್ಕೆಂದು ಅರ್ಜಿ ಸಲ್ಲಿಸಿದ್ದು, ಭಾರತೀಯ ವಿವಾಹ ಕಾಯ್ದೆ 13 (1) ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ ಯುವರಾಜ್‌ಕುಮಾರ್.
ಯುವ ಹಾಗೂ ಶ್ರೀದೇವಿ ಇವರಿಬ್ಬರದು ಪ್ರೇಮ ವಿವಾಹ. ಏಳು ವರ್ಷ ಪ್ರೀತಿಸಿ ಅನಂತರ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು.
ಇವರಿಬ್ಬರ ಮೊದಲ ಭೇಟಿ ದೆಹಲಿಯಲ್ಲಿ ಆಗಿತ್ತು ಎನ್ನಲಾಗಿದೆ. ಶ್ರೀದೇವಿಯವರು ಮೂಲತಃ ಮೈಸೂರಿನವರು. ಉನ್ನತ ವ್ಯಾಸಂಗ ಎಲ್ಲವೂ ಮೈಸೂರಿನಲ್ಲೇ ಆಗಿದೆ. ಯುವ ಹಾಗೂ ಶ್ರೀದೇವಿ ಮೊದಲು ಸ್ನೇಹಿತರಾಗಿದ್ರು. ನಂತರ ಇವರಿಬ್ಬರು ಪ್ರೀತಿ ಮಾಡಲು ಶುರು ಮಾಡಿದ್ದಾರೆ. ಡಾ.ರಾಜ್‌ಕುಮಾರ್ ಅವರ ಕುಟುಂಬ ನಡೆಸುತ್ತಿರುವ ಸಿವಿಲ್ ಸರ್ವಿಸ್ ಅಕಾಡೆಮಿ ಉಸ್ತುವಾರಿಯನ್ನು ಶ್ರೀದೇವಿ ವಹಿಸಿಕೊಂಡಿದ್ದರು.
ಸ್ನೇಹಿತರಾಗಿದ್ದ ಇವರ ಮಧ್ಯೆ ಪ್ರೀತಿ ಚಿಗುರಿದ್ದು, ನಂತರ ಇವರಿಬ್ಬರ ಪ್ರೀತಿಗೆ ಕುಟುಂಬದವರೂ ಒಪ್ಪಿಗೆ ನೀಡಿದ್ದು, ಆ ಮೂಲಕ 2019 ರಲ್ಲಿ ಯುವ ರಾಜ್‌ಕುಮಾರ್-ಶ್ರೀದೇವಿ ಅವರ ವಿವಾಹ ಅದ್ಧೂರಿಯಾಗಿ ವಿಜೃಂಭಣೆಯಿಂದ ನಡೆದಿತ್ತು. ಇದೀಗ ಮನಸ್ತಾಪದಿಂದ ತಮ್ಮ ಐದು ವರ್ಷಗಳ ದಾಂಪತ್ಯ ಜೀವನಕ್ಕೆ ಯುವರಾಜ್‌ಕುಮಾರ್ – ಶ್ರೀದೇವಿ ಅಂತ್ಯ ಹಾಡಲಿದ್ದಾರೆ.
