Home » Surapura: ಸುರಪುರ: ನಿಮ್ಹಾನ್ಸ್ ಮತ್ತು ಕರ್ನಾಟಕ ಯುವಜನ ಇಲಾಖೆಯಿಂದ ಯುವ ಸ್ಪಂದನ ಕಾರ್ಯಕ್ರಮ

Surapura: ಸುರಪುರ: ನಿಮ್ಹಾನ್ಸ್ ಮತ್ತು ಕರ್ನಾಟಕ ಯುವಜನ ಇಲಾಖೆಯಿಂದ ಯುವ ಸ್ಪಂದನ ಕಾರ್ಯಕ್ರಮ

by ಹೊಸಕನ್ನಡ
0 comments

Surapura: ಜನ ಅರೋಗ್ಯ ಕೇಂದ್ರ ನಿಮ್ಹಾನ್ಸ್, ಬೆಂಗಳೂರು ಹಾಗೂ ಕರ್ನಾಟಕ ಸರ್ಕಾರ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯಾದಗಿರಿ ಇವರ ಸಹಯೋಗದೊಂದಿಗೆ ಯುವ ಸ್ಪಂದನ ಕಾರ್ಯಕ್ರಮ ಹಾಗೂ ಯುವ ಕನಜ ಪೋರ್ಟಲ್ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಯಿತು.

ದಿನಾಂಕ 17.08.2024 ರಂದು, ಸುರಪುರ (surapura ) ತಾಲೂಕಿನಲ್ಲಿ  ಬರುವ ಲಕ್ಷ್ಮಿಪುರ ಸರಕಾರಿ ಶಾಲೆಯಲ್ಲಿ ಕಾರ್ಯಕ್ರಮ ನಡೆಯಿತು. ಯುವ ಸಬಲೀಕರಣ, ಆರೋಗ್ಯ ಮತ್ತು  ಜೀವನಶೈಲಿ, ಲಿಂಗ ಲಿಂಗತ್ವ, ಲೈಂಗಿಕತೆ, ಹಾಗೂ ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ನಿಭಾಯಿಸುತ್ತಿರುವ ಸವಾಲುಗಳು, ಭಾವನಾತ್ಮಕವಾದ ಸಂಬಂಧಗಳು, ನೆನಪಿನ ಶಕ್ತಿ, ಏಕಾಗ್ರತೆ ಶಿಕ್ಷಣದ ಒತ್ತಡ ನಿಭಾಯಿಸುವಿಕೆ, ಎಲ್ಲಾ ಪ್ರಮುಖ ಮುಂತಾದ ವಿಷಯಗಳಿಗೆ ಮಾರ್ಗದರ್ಶನ  ನೀಡಲಾಯಿತು. ಯುವ ಸ್ಪಂದನ ಕಾರ್ಯಕ್ರಮದ ಮೂಲ ಉದ್ದೇಶವೇ ಅದು.

15-  35 ವರ್ಷದೊಳಗೆ ಯುವಕ ಯುವತಿಯರಿಗೆ ಮಾನಸಿಕ, ದೈಹಿಕ, ಕೌಟುಂಬಿಕ, ಸಮಸ್ಯೆಗಳಿಗೆ ಯುವ ಸ್ಪಂದನ ಕೇಂದ್ರದಲ್ಲಿ ಸಮಾಲೋಚನೆ ನಡೆಸಿ ಸುತ್ತು ಮಾರ್ಗ ಮಾರ್ಗದರ್ಶನ ಕೊಡುವಂತಹ ಕೆಲಸವನ್ನು ಯುವ ಸ್ಪಂದನ ಮಾಡುತ್ತಿದೆ. ಈ ಕಾರ್ಯಕ್ರಮವು ಸರಕಾರದ ಕಾರ್ಯಕ್ರಮವಾಗಿದ್ದು, ಇಲ್ಲಿ ದೊರೆಯುವ ಪೂರ್ಣ ಮಾರ್ಗದರ್ಶನ ಉಚಿತವಾಗಿರುತ್ತದೆ. ಈ ಸಂದರ್ಭದಲ್ಲಿ ಆ ಶಾಲೆ ಮುಖ್ಯ ಗುರುಗಳು ಹಾಗೂ ಇತರ ಸಿಬ್ಬಂದಿ ವರ್ಗದವರು ಹಾಜರಿದ್ದರು. (ಮಾಹಿತಿ: ಯುವ ಪರಿವರ್ತಕರು, ಯಾದಗಿರಿ, ಶೊರಾಪುರ್ ತಾಲೂಕ್, ತಾಯಪ್ಪ ಯಾದವ್)

You may also like

Leave a Comment