8
Kolara: ವಸತಿ ಸಚಿವ ಜಮೀರ್ ಅಹ್ಮದ್ ಕೋಲಾರದಲ್ಲಿ ಹೊಸ ಸವಾಲ್ ಒಂದನ್ನು ಹಾಕಿದ್ದು, ತಾವು ಸವಾಲಿನಲ್ಲಿ ಸೋತರೆ ತಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ.
ಕೋಲಾರ ಜಿಲ್ಲೆಗೆ ಭೇಟಿ ನೀಡಿದಂತಹ ಆ ಸಂದರ್ಭದಲ್ಲಿ ಜಮೀರ್ ಅಹಮದ್ ಅವರು ಬಿಜೆಪಿ ಅವರು ಒಂದೇ ಒಂದು ಮನೆ ನೀಡಿದ್ದರೆ ತಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ. ಅವರು ಮನೆ ನೀಡಿದ್ದರೆ ಸಾಬೀತುಪಡಿಸಲಿ, ನಮ್ಮ ಸರ್ಕಾರದಲ್ಲಿ 40 ಸಾವಿರ ಮನೆಗಳು ಈಗಾಗಲೇ ತಯಾರಿವೆ, ಕೊಡುವುದಷ್ಟೇ ಬಾಕಿ ಎಂದಿದ್ದಾರೆ. ಜೊತೆಗೆ ಇದ ತನ್ನ ಓಪನ್ ಸವಾಲ್ ಎಂದು ಕೂಡ ಸಚಿವರು ಹೇಳಿದ್ದಾರೆ
