Home » ಇನ್ಸೆಂಟಿವ್ ಹೆಚ್ಚಿಸಿ ವಹಿವಾಟು ಉಳಿಸಿಕೊಂಡ ಜೊಮಾಟೊ, ಸಿಗ್ಗಿ

ಇನ್ಸೆಂಟಿವ್ ಹೆಚ್ಚಿಸಿ ವಹಿವಾಟು ಉಳಿಸಿಕೊಂಡ ಜೊಮಾಟೊ, ಸಿಗ್ಗಿ

0 comments

ಹೊಸದಿಲ್ಲಿ: ಹೊಸ ವರ್ಷಾಚರಣೆ ವೇಳೆ ಪ್ರತಿಭಟನೆ ನಡೆಸುವುದಾಗಿ ಗಿಗ್ ಕಾರ್ಮಿಕರ ಸಂಘಟನೆಗಳು ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ, ಆನ್‌ಲೈನ್ ಆಹಾರ ವಿತರಕ ಸಂಸ್ಥೆಗಳಾದ ಜೊಮಾಟೊ ಮತ್ತು ಸ್ವಿಗ್ಗಿ ತಮ್ಮ ವಿತರಣಾ ಸಿಬ್ಬಂದಿಯ ಪ್ರೋತ್ಸಾಹಧನ ಹೆಚ್ಚಿಸುವ ಮೂಲಕ ವಹಿವಾಟಿಗೆ ಧಕ್ಕೆಯಾಗದಂತೆ ನೋಡಿಕೊಂಡವು.

ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಮತ್ತು ಭಾರತೀಯ ಅಪ್ಲಿಕೇಶನ್-ಆಧಾರಿತ ಕಾರ್ಮಿಕರ ಒಕ್ಕೂಟ (ಟಿಜಿಪಿಡಬ್ಲ್ಯೂಯು) ಸಾರಿಗೆ ಕಾರ್ಮಿಕರ ಒಕ್ಕೂಟ (ಐಎಫ್ ಎಟಿ)ಗಳು ಉತ್ತಮ ವೇತನ ಮತ್ತು ಸುಧಾರಿತ ಕೆಲಸದ ಪರಿ ಸ್ಥಿತಿಗಳಿಗಾಗಿ ಒತ್ತಾಯಿಸಿ ಹೊಸ ವರ್ಷಾಚರಣೆ ವೇಳೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದವು.

ಮುಷ್ಕರದಿಂದ ಹೊಸ ವರ್ಷ ವಹಿವಾಟಿಗೆ ಏಟು ಬೀಳುತ್ತದೆ ಎಂದು ಜೊಮ್ಯಾಟೊ, ಸ್ವಿಗ್ಗಿ, ಬೆಂಕಿಟ್, ಇನ್ಸ್‌ಟಾಮಾರ್ಟ್, ಝಡ್ ಕಳವಳಗೊಂಡಿದ್ದವು. ಆ ಪೈಕಿ ಜೊಮಾಟೊ ಮತ್ತು ಸ್ವಿಗ್ಗಿ ಹಬ್ಬದ ಅವಧಿಯಲ್ಲಿ ತಮ್ಮ ವಿತರಣಾ ಪಾಲುದಾರರಿಗೆ ಹೆಚ್ಚುವರಿ ಪ್ರೋತ್ಸಾಹಧನಗಳನ್ನು ನೀಡುವುದಾಗಿ ಘೋಷಿಸಿದರು.

ಹೊಸ ವರ್ಷದ ಮುನ್ನಾ ದಿನವಾದ ಬುಧವಾರ ಸಂಜೆ 6 ರಿಂದ ಮಧ್ಯಾರಾತ್ರಿ 12 ಹೊಸ ವರ್ಷದ ಮುನ್ನಾ ದಿನವಾದ ಗಂಟೆವರೆಗೆ ಪೀಕ್ ಸಮಯದಲ್ಲಿ ಜೊಮಾಟೊ ವಿತರಣಾ ಪಾಲುದಾರರಿಗೆ ಪ್ರತಿ ಆರ್ಡ‌್ರ 120 ರೂ.ನಿಂದ 150 ರೂ. ಪಾವತಿಸುವುದಾಗಿ ಅನುಸಾರವಾಗಿ ಸರಬರಾಜುದಾರು 3,000 ಹೇಳಿದೆ. ಈ ಅವಧಿಯಲ್ಲಿ ಬೇಡಿಕೆ ಪ್ರಮಾಣಕ್ಕೆ ರೂ. ತನಕ ಗಳಿಸಬಹುದು ಎಂದು ಹೇಳಿದೆ. ಆರ್ಡರ್ ನಿರಾಕರಣೆ ಮತ್ತು ರದ್ದು ಮಾಡಿದಾಗ ವಿಧಿಸುತ್ತಿದ್ದ ದಂಡವನ್ನು ತಾತ್ಕಾಲಿಕವಾಗಿ ಮನ್ನಾ ಮಾಡಿದೆ. ಇದೇ ರೀತಿ ಸಿಗ್ನಿ ಕೂಡ ವರ್ಷಾಂತ್ಯದ ಪ್ರೋತ್ಸಾಹಧನವನ್ನು ಹೆಚ್ಚಿಸಿದೆ. ಡಿಲಿವರಿ ವರ್ಕ‌್ರಗಳು ಡಿಸೆಂಬರ್ 31 ಮತ್ತು ಜನವರಿ 1ರಂದು ಎರಡು ದಿನಗಳಲ್ಲಿ 10 ಸಾವಿರ ರೂ. ಗಳಿಸಬಹುದು ಎಂದಿದೆ.

You may also like