Home » ಹಳೆಯಂಗಡಿ:ನಂದಿನಿ ನದಿಯ ನೀರಿನಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆ|ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಹಳೆಯಂಗಡಿ:ನಂದಿನಿ ನದಿಯ ನೀರಿನಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆ|ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

0 comments

ಹಳೆಯಂಗಡಿ :ಕೊಪ್ಪಳದ ಅಣೆಕಟ್ಟು ಬಳಿಯ ರೈಲ್ವೆ ಸೇತುವೆ ಕೆಳಗಡೆ ನಂದಿನಿ ನದಿಯ ನೀರಿನಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾದ ಘಟನೆ ವರದಿಯಾಗಿದೆ.

ಹಳೆಯಂಗಡಿ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಳಿಯ ಪಡುಪಣಂಬೂರು ಗ್ರಾಮ ಪಂಚಾಯತ್‌ನ ಬೆಳ್ಳಾಯರು ಗ್ರಾಮದ ನಿವಾಸಿ ಗಿರಿಯಪ್ಪ ಶೆಟ್ಟಿಗಾರ್ (74) ಎಂಬುವವರೆಂದು ಗುರುತಿಸಲಾಗಿದೆ.

ಮೃತರು ತೆಂಗಿನ ಕಟ್ಟೆ ಕಟ್ಟುವುದು ಸಹಿತ ಕೂಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.ಇವರು ತಮ್ಮ ಮನೆಯಿಂದ ಕಟ್ಟಿಗೆ ತರಲು ತೆರಳಿದ್ದರು ಎಂದು ತಿಳಿದು ಬಂದಿದ್ದು,ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

You may also like

Leave a Comment