Home » ಕಾರ್ಕಳ | ತನ್ನ ಜಾಗಕ್ಕೆ ಪಕ್ಕದ ಮನೆಯ ದನ ಬಂತೆಂದು ಕತ್ತಿ ಎಸೆದ ಆರೋಪಿ | ದನದ ಕಾಲಿಗೆ ಗಂಭೀರ ಗಾಯ, ಪ್ರಕರಣ ದಾಖಲು

ಕಾರ್ಕಳ | ತನ್ನ ಜಾಗಕ್ಕೆ ಪಕ್ಕದ ಮನೆಯ ದನ ಬಂತೆಂದು ಕತ್ತಿ ಎಸೆದ ಆರೋಪಿ | ದನದ ಕಾಲಿಗೆ ಗಂಭೀರ ಗಾಯ, ಪ್ರಕರಣ ದಾಖಲು

0 comments

ಕಾರ್ಕಳ: ಜೀವನೋಪಾಯಕ್ಕಾಗಿ ಸಾಕುತ್ತಿದ್ದ ದನವೊಂದರ ಕಾಲನ್ನು ನೆರೆಮನೆಯ ವ್ಯಕ್ತಿಯೊಬ್ಬರು ಕಡಿದ ಘಟನೆ ಕುಕ್ಕುಂದೂರು ಗ್ರಾಮದ ನಕ್ರೆ ಪೊಸನೊಟ್ಟು ಎಂಬಲ್ಲಿ ನಡೆದಿದೆ.

ಪೊಸನೊಟ್ಟಿನ ಪ್ರಮೀಳಾ ಎಂಬುವವರು ಪ್ರಕರಣದ ಬಗೆಗೆ ದೂರು ನೀಡಿದವರಾಗಿದ್ದಾರೆ.ನೆರೆಮನೆಯ ಡೆಮ್ಮಿ ಡಿಸೋಜಾ ಆರೋಪಿಯಾಗಿದ್ದಾರೆ.

ಪ್ರಮೀಳಾ ಅವರ ಮನೆಯ ಹಿತ್ತಲಿಗೆ ತಡೆಗೋಡೆ ಇಲ್ಲದೇ ಇದ್ದುದರಿಂದ,ಮೇಯಲು ಬಿಟ್ಟ ದನವು ಡೆಮ್ಮಿಡಿಸೋಜಾ ಅವರ ಹಿತ್ತಲಿಗೆ ಹೋಗಿತ್ತು.ಈ ಸಂದರ್ಭದಲ್ಲಿ ದನವನ್ನು ಕೊಲ್ಲುವ ಉದ್ದೇಶದಿಂದ,ಎಸೆದ ಕತ್ತಿಯು ದನದ ಕಾಲಿಗೆ ಬಿದ್ದಿದೆ.

ದನದ ಹಿಂದಿನ ಬಲಕಾಲಿಗೆ ಬಲವಾಗಿ ಪೆಟ್ಟು ಬಿದ್ದಿದ್ದು,ರಕ್ತ ಗಾಯವಾಗಿರುವುದಾಗಿ ಕಾರ್ಕಳ ನಗರ ಠಾಣೆಗೆ ಪ್ರಮೀಳಾ ದೂರು ನೀಡಿದ್ದಾರೆ.

ದನದ ಕಾಲು ಕಡಿಯಲಾಗಿದೆ ಎಂಬ ಮಾಹಿತಿ ತಿಳಿದ ಹಿಂದು ಜಾಗರಣಾ ವೇದಿಕೆ ಘಟನಾ ಸ್ಥಳಕ್ಕೆ ಅಗಮಿಸಿ ಮನೆ ಮಂದಿಗೆ ಧೈರ್ಯ ತುಂಬಿದ್ದಾರೆ.ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

You may also like

Leave a Comment