Home » Udupi: ನಾಗರಪಂಚಮಿ ಸಂಭ್ರಮ- ಉಡುಪಿಯಲ್ಲಿ ಉರಗ ತಜ್ಞರಿಂದ ನಿಜ ನಾಗನಿಗೆ ಅಭಿಷೇಕ, ಪೂಜೆ

Udupi: ನಾಗರಪಂಚಮಿ ಸಂಭ್ರಮ- ಉಡುಪಿಯಲ್ಲಿ ಉರಗ ತಜ್ಞರಿಂದ ನಿಜ ನಾಗನಿಗೆ ಅಭಿಷೇಕ, ಪೂಜೆ

5 comments
Udupi

Udupi: ನಿನ್ನೆ(ಆ.9) ನಾಡಿನೆಲ್ಲೆಡೆ ಸಡಗರ, ಸಂಭ್ರಮ, ಭಯ, ಭಕ್ತಿಗಳಿಂದ ನಾಗರ ಪಂಚಮಿಯನ್ನು ಆಚರಿಸಲಾಗಿದೆ. ಅದರಲ್ಲೂ ನಾಗರಾಧನೆಗೆ ಖ್ಯಾತಿ ಗಳಿಸಿರುವ ಕರಾವಳಿ ಭಾಗದಲ್ಲಿ ಇದರ ಸಂಭ್ರಮ ತುಸು ಹೆಚ್ಚೆನ್ನಬಹುದು. ಈ ಹಬ್ಬದ ಆಚರಣೆಯೇ ಇಲ್ಲಿ ಸಾಲು ಸಾಲು ಹಬ್ಬಗಳಿಗೆ ನಾಂದಿಯಾಗುತ್ತದೆ.

ನಾಗರ ಪಂಚಮಿ ಪ್ರಯುಕ್ತ ನಾಡಿನೆಲ್ಲೆಡೆ ಭಕ್ತರು ಕಲ್ಲ ನಾಗನಿಗೆ ಹಾಲೆರೆದರೆ ಉಡುಪಿ(Udupi)ಯಲ್ಲಿ ಅರ್ಚಕರೊಬ್ಬರು ನಿಜ ನಾಗನಿಗೆ ಸೀಯಾಳಾಭಿಷೇಕ ಮಾಡಿದ್ದಾರೆ. ನಾಗದೇವರಿಗೆ ಜಲಾಭಿಷೇಕ, ಸೀಯಾಳಾಭಿಷೇಕ ಮಾಡಿದ ಕಾಪು ಮೂಲದ ಮಜೂರು ಗ್ರಾಮದ ಗೋವರ್ಧನ್ ರಾವ್(Govardhan Rao) ಅವರು ಪ್ರತೀ ವರ್ಷವೂ ಜೀವಂತ ನಾಗನಿಗೆ ಹಾಲು ಎರೆಯುವ ಮೂಲಕ ನಾಗರಪಂಚಮಿ(Nagarapanchami) ಆಚರಿಸುತ್ತಿದ್ದಾರೆ.

ಹೌದು, ಮಜೂರು ಮಲ್ಲಾರಿನ ಗೋವರ್ಧನ್ ಭಟ್ ಅವರು ಹಾವುಗಳ ರಕ್ಷಣೆ ಮಾಡುತ್ತಾರೆ. ಕಾಪು ಪರಿಸರದಲ್ಲಿ ಚಿರಪರಿಚಿತರು. ಈ ಪರಿಸರದಲ್ಲಿ ಎಲ್ಲೆ ಹಾವುಗಳೂ ಸಂಕಷ್ಟದಲ್ಲಿದ್ದರೆ ಗೋವರ್ಧರನ್ ನೆರೆವಿಗೆ ದಾವಿಸ್ತಾರೆ. ಗಾಯಗೊಂಡ ಹಾವುಗಳನ್ನು ಆರೈಕೆ ಮಾಡಿ ಗುಣಮುಖಗೊಂಡ ನಂತರ ಕಾಡಿಗೆ ಬಿಡುವ ಮೂಲಕ ಹಲವು ಬಾರಿ ಉರಗ ಪ್ರೇಮ ಮೆರೆದಿದ್ದಾರೆ.

ಅಂದಹಾಗೆ ಗೋವರ್ಧನ್ ಅವರು ಈ ವರೆಗೆ 1೦೦೦ ಕ್ಕೂ ಅಧಿಕ ಹಾವುಗಳ ಆರೈಕೆ ಮಾಡಿದ್ದಾರೆ. ಅಲ್ಲದೆ ತನ್ನ ಆರೈಕೆಯಲ್ಲಿ ಇರುವ ಹಾವುಗಳಿಗೆ ತನು ಏರೆಯುವ ಮೂಲಕ ನಾಗರ ಪಂಚಮಿಯನ್ನು ಆಚರಿಸುತ್ತಾರೆ.

You may also like

Leave a Comment