Home » Kundapura: ಕೂಲಿ ಕೆಲಸದ ವೇಳೆ ಅತಿಯಾದ ಮಾತ್ರೆ ಸೇವಿಸಿ ಮಹಿಳೆ ಸಾವು – ಪ್ರಕರಣ ದಾಖಲು

Kundapura: ಕೂಲಿ ಕೆಲಸದ ವೇಳೆ ಅತಿಯಾದ ಮಾತ್ರೆ ಸೇವಿಸಿ ಮಹಿಳೆ ಸಾವು – ಪ್ರಕರಣ ದಾಖಲು

521 comments

Kundapura: ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ಅತಿಯಾದ ಮಾತ್ರೆ ಹಾಗೂ ಇಲಿ ಪಾಷಾಣ ಸೇವಿಸಿ ಅಸ್ವಸ್ಥಗೊಂಡ ಕಾರಣ ಮಹಿಳೆಯೊಬ್ಬರು
ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಕುಂದಾಪುರ(Kundapura) ತಾಲ್ಲೂಕಿನ ತಲ್ಲೂರು ಗ್ರಾಮದ ಗೀತಾ (41) ಅವರು ಕುಂದಾಪುರದ ಸಂಗಮ್‌ ಬಳಿ ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ಅತಿಯಾದ ಮಾತ್ರೆ ಹಾಗೂ ಇಲಿ ಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದರು. ನ. 11ರಂದು ಅವರು ಅಸ್ವಸ್ಥಗೊಂಡಿದ್ದು, ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಉಡುಪಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದ್ರೆ ನ. 13ರ ಮಧ್ಯಾಹ್ನ ಗೀತಾ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಪುತ್ರಿ ಶ್ರೀವಿತಾ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment