Home » Udupi News: ಉಡುಪಿ ನಾಲ್ವರ ಹಂತಕ ಅನುಮಾನ ಪಿಶಾಚಿ; ಪತ್ನಿಗೂ ಚಿತ್ರಹಿಂಸೆ ನೀಡಿ ಕೊಲೆಗೂ ಯತ್ನಿಸಿದ್ದ !

Udupi News: ಉಡುಪಿ ನಾಲ್ವರ ಹಂತಕ ಅನುಮಾನ ಪಿಶಾಚಿ; ಪತ್ನಿಗೂ ಚಿತ್ರಹಿಂಸೆ ನೀಡಿ ಕೊಲೆಗೂ ಯತ್ನಿಸಿದ್ದ !

2 comments
Udupi

Udupi Crime News: ಉಡುಪಿ ನೇಜಾರುವಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಆರೋಪಿಯನ್ನು (Udupi Crime News) ಪೊಲೀಸರು ವಶಕ್ಕೆ ಪಡೆದಿದ್ದು, ನಿನ್ನೆ ಸ್ಥಳ ಮಹಜರು ಕೂಡಾ ಮಾಡಲಾಗಿತ್ತು. ಇದೀಗ ಪ್ರವೀಣ್‌ ಅರುಣ್‌ ಚೌಗುಲೆ ಕುಟುಂಬದ ಹಿನ್ನೆಲೆಯ ಕುರಿತು ತನಿಖಾ ವರದಿಯೊಂದು ಬಹಿರಂಗೊಂಡಿದೆ ಎಂದು ಮಾಧ್ಯಮವೊಂದು ಪ್ರಕಟ ಮಾಡಿದೆ.

ಆರೋಪಿ ಅರುಣ್‌ ಚೌಗುಲೆ ಕುಟುಂಬ ಮಹಾರಾಷ್ಟ್ರದಲ್ಲಿದೆ. ಈತ ಪೊಲೀಸ್‌ ಇಲಾಖೆಯಲ್ಲಿ ಕೆಲವು ಸಮಯ ಕೆಲಸ ಮಾಡಿದ್ದ. ಈತನ ಹತ್ತಿರದ ಸಂಬಂಧಿಕರು ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈತ ಅನುಮಾನದ ದೃಷ್ಟಿಯುಳ್ಳವನು ಎಂದು ವರದಿಯಾಗಿದೆ. ಮನೆಯಲ್ಲಿ ಏನೇ ವಸ್ತು ಖಾಲಿಯಾದರೂ ಅದನ್ನು ತಗೊಂಡು ಬರುವ ಸ್ವಾತಂತ್ರ್ಯ ಪತ್ನಿಗೆ ಇರಲಿಲ್ಲ ಎಂದು ವರದಿಯಾಗಿದೆ.

ಈತ ತನ್ನ ಕೆಲಸ ಮುಗಿಸಿ ಬಂದು ಅನಂತರ ಪತ್ನಿ ಜೊತೆ ಹೋಗಿ ಮನೆ ಸಾಮಾಗ್ರಿ ತರುತ್ತಿದ್ದ. ಈತನ ಪತ್ನಿ ಮಹಾರಾಷ್ಟ್ರದ ಸಂಪ್ರದಾಯಸ್ಥ ಕುಟುಂಬದವರಾಗಿದ್ದು, ಪತಿಯ ಹಿಂಸೆಗೆ ಏನೂ ಹೇಳದೆ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಸಣ್ಣಪುಟ್ಟ ವಿಚಾರಕ್ಕೆ ಅನುಮಾನ ಪಡುತ್ತಿದ್ದ ಚೌಗುಲೆ ಎರಡು ಬಾರಿ ತನ್ನ ಪತ್ನಿಯ ಕೊಲೆ ಮಾಡಲು ಮುಂದಾಗಿದ್ದ ಎಂದು ವಿ.ಕ.ಮಾಧ್ಯಮ ವರದಿ ಮಾಡಿದೆ.

ಪರರಿಗೆ ಸಹಾಯ ಮಾಡುವುದು, ಉದ್ಯೋಗ ತೆಗೆಸಿಕೊಡುವುದು, ಇವೆಲ್ಲವನ್ನು ಆತ ರೂಢಿಸಿಕೊಂಡಿದ್ದ. ಹಾಗಾಗಿ ಯಾರಿಗೂ ಆತ ಕೆಟ್ಟವ ಎಂಬ ಭಾವನೆ ಇರಲಿಲ್ಲ. ಈ ರೀತಿಯಾಗಿ ಏನಾದರೂ ಅಯ್ನಾಜ್‌ ಕುಟುಂಬಕ್ಕೆ ಸಹಾಯ ಮಾಡಿದ್ದಾನೋ? ಎಂಬ ಅನುಮಾನವಿದೆ. ಈತನ ದೈನಂದಿನ ಚಟುವಟಿಕೆಗಳನ್ನು ಅಯ್ನಾಜ್‌ನೊಂದಿಗೆ ಶೇರ್‌ ಮಾಡಿಕೊಳ್ಳುತ್ತಿದ್ದ. ಈ ಪರಿಯ ಸ್ನೇಹವೇ ಆಕೆಯ ಕುಟುಂಬಿಕರ ಕೊಲೆಗೆ ಕಾರಣವಾಯಿತೇ ಎಂಬುವುದು ಇನ್ನಷ್ಟೇ ತಿಳಿಯಬೇಕಿದೆ.

ನ.12ರಂದು ಉಡುಪಿಯ ಒಂದೇ ಕುಟುಂಬದ ನಾಲ್ವರ ಹತ್ಯೆ ಮಾಡಿದ ಬಳಿಕ, ತನ್ನ ಕುಟುಂಬದೊಂದಿಗೆ ಕುಡುಚಿಗೆ ಪ್ರಯಾಣ ಮಾಡಿದ್ದಾನೆ. ನನಗೆ ಇನ್ನು ಮೂರು ದಿನ ರಜೆ, ನಾವು ಊರಿಗೆ ಹೋಗಿ ಬರೋಣ ಎಂದು ತನ್ನ ಕುಟುಂಬಿಕರಿಗೆ ತಿಳಿಸಿದ್ದಾನೆ. ನ.12 ರಿಂದ ಆರೋಪಿಯ ವಾಟ್ಸಪ್‌ ಕೂಡಾ ಆಫ್‌ ಆಗಿದೆ.

ಇದನ್ನೂ ಓದಿ: Udupi Family Murder Case: ಉಡುಪಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಆರೋಪಿ ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರು, ಸ್ಥಳದಲ್ಲಿ ಬಿಗಿಬಂದೋಬಸ್ತು!!!

ಚೌಗುಲೆ ಐಷರಾಮಿ ಜೀವನ ನಡೆಸುತ್ತಿದ್ದ. ಈತನ ವೇತನದಿಂದ ಇಷ್ಟೆಲ್ಲ ಮಾಡಲು ಸಾಧ್ಯವೇ ಎಂಬುವುದು ಇದೀಗ ಇರುವ ಅನುಮಾನ. ಮಂಗಳೂರಿನ ಕೆಪಿಟಿ ಬಳಿ ಫ್ಲ್ಯಾಟ್‌, ಎರಡು ನಿವೇಶನ, ಸುರತ್ಕಲ್‌ನಲ್ಲಿ ಸ್ವಂತ ಮನೆ ಸೇರಿ ಅಪಾರ ಆಸ್ತಿ ಪಾಸ್ತಿ ಈತನಿಗೆ ಇದೆ ಎಂದು ವರದಿಯಾಗಿದೆ.

ಮಾದಕವಸ್ತು, ಅಕ್ರಮ ಚಿನ್ನ ಸಾಗಾಟದ ನಂಟೇನಾದರೂ ಈತನಿಗೆ ಇದೆಯೇ ಎಂಬುವುದು ಇನ್ನಷ್ಟೇ ತನಿಖೆಯಿಂದ ತಿಳಿಯಬೇಕಿದೆ. ವಿಮಾನದಲ್ಲಿ ಕೆಲಸ ಮಾಡುವುದರಿಂದ ಈತ ಅಕ್ರಮ ಚಟುವಟಿಕೆಗಳಿಗೆ ಏನಾದರೂ ಬೆಂಬಲ ನೀಡಿದ್ದಾನೆಯೇ ಎಂಬ ಪ್ರಶ್ನೆ ಕೂಡಾ ಎದ್ದೇಳಿದ್ದು, ಸಂಪೂರ್ಣ ತನಿಖೆಯ ನಂತರವೇ ಇದಕ್ಕೆ ಉತ್ತರ ಸಿಗಲಿದೆ.

ಇದನ್ನೂ ಓದಿ:Udupi: ನಾಲ್ವರ ಹತ್ಯೆ ಪ್ರಕರಣ; ಉಡುಪಿ ಎಸ್‌.ಪಿ. ನೀಡಿದ್ರು ಬಿಗ್‌ ಅಪ್ಡೇಟ್‌!!!

You may also like

Leave a Comment