Home » ಉಡುಪಿ | ಮಣಿಪಾಲದ ಫೂಟ್ ವೇರ್ ಮಳಿಗೆಯಲ್ಲಿ ವಿದ್ಯುತ್ ಅವಘಡ, ಲಕ್ಷಾಂತರ ರೂ. ನಷ್ಟ

ಉಡುಪಿ | ಮಣಿಪಾಲದ ಫೂಟ್ ವೇರ್ ಮಳಿಗೆಯಲ್ಲಿ ವಿದ್ಯುತ್ ಅವಘಡ, ಲಕ್ಷಾಂತರ ರೂ. ನಷ್ಟ

by ಹೊಸಕನ್ನಡ
0 comments

ನಿನ್ನೆ ರಾತ್ರಿ ಮಣಿಪಾಲದ ಅಂಗಡಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಖ್ಯಾತ ಫೂಟ್ ವೇರ್ ಮಳಿಗೆ ಇದಾಗಿದ್ದು, ಶಾಟ್ ಸರ್ಕ್ಯೂಟ್’ನಿಂದ ದುರಂತ ಸಂಭವಿಸಿದೆ. ಒಳಗಿದ್ದ ಸಂಪೂರ್ಣ ದಾಸ್ತಾನು ಬೆಂಕಿಗಾಹುತಿಯಾಗಿದೆ.

ಅಂಗಡಿ ಮಾಲೀಕರು ರಾತ್ರಿ ವ್ಯವಹಾರ ಮುಗಿಸಿ ಅಂಗಡಿ ಮುಚ್ಚಿ ತೆರಳಿದ ಬಳಿಕ ಈ ಘಟನೆ ನಡೆದಿದ್ದು, ಫೂಟ್ ವೇರ್ ಮಳಿಗೆ ಅಲ್ಲದೇ ಪಕ್ಕದ ಒಂದು ಅಂಗಡಿಗೂ ಹೊಗೆ ಆವರಿಸಿಕೊಂಡಿತ್ತು.

ಘಟನೆಯಿಂದ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಉಡುಪಿ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

You may also like

Leave a Comment