Home » Manipal: Canara Bank ಮಹಿಳಾ ಅಧಿಕಾರಿ ಆತ್ಮಹತ್ಯೆ!!!

Manipal: Canara Bank ಮಹಿಳಾ ಅಧಿಕಾರಿ ಆತ್ಮಹತ್ಯೆ!!!

2 comments
Manipal

Manipal: ಮಣಿಪಾಲದ ಕೆನರಾ ಬ್ಯಾಂಕ್(Canara Bank)ಶಾಖೆಯ ಸಹಾಯಕ ವ್ಯವಸ್ಥಾಪಕಿಯಾಗಿದ್ದ ಸೋನಾಲಿ (35) ಗುರುವಾರ ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ(Suicide)ಶರಣಾಗಿದ್ದಾರೆ ಎಂದು ವರದಿಯಾಗಿದೆ.

ಮಣಿಪಾಲದ( Manipal) ಕೆನರಾ ಬ್ಯಾಂಕಿನಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿದ್ದ ಸೋನಾಲಿ ಖಿನ್ನತೆಯಿಂದ ಬಳಲುತ್ತಿದ್ದರೆನ್ನಲಾಗಿದೆ. ಕೆಲ ದಿನಗಳ ಹಿಂದಷ್ಟೇ ಮೆಟ್ಟಿಲಿನಿಂದ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಗುರುವಾರವಷ್ಟೇ ಆಸ್ಪತ್ರೆಯಿಂದ(Hospital)ಡಿಸ್ಚಾರ್ಜ್ ಆಗಿದ್ದರು ಎನ್ನಲಾಗಿದೆ. 2022ರಲ್ಲಿ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದ ಈಕೆ ಒಬ್ಬಂಟಿಯಾಗಿ ವಿಭುದಪ್ರಿಯನಗರದ ಫ್ಲಾಟೊಂದರಲ್ಲಿ ನೆಲೆಸಿದ್ದರು.

ಸಂಜೆ 6 ಗಂಟೆ ಸುಮಾರಿಗೆ ಸೋನಾಲಿ ಅವರ ಪೋಷಕರು ಕರೆ ಮಾಡಿದಾಗ ಕರೆ ಸ್ವೀಕರಿಸದಿದ್ದ ಹಿನ್ನೆಲೆ ರಾತ್ರಿ 8ಗಂಟೆಗೆ ಪ್ಲಾಟಿಗೆ ಬಂದು ನೋಡಿದ ಸಂದರ್ಭ ರೂಮಿನ ಒಳಗಿನಿಂದ ಚಿಲಕ ಹಾಕಲಾಗಿತ್ತು. ಹೀಗಾಗಿ, ಬಾಗಿಲು ಒಡೆದು ಒಳಹೊಕ್ಕಾಗ ಸೋನಾಲಿ ಬೆಡ್ ರೂಮಿನಲ್ಲಿ ಫ್ಯಾನಿಗೆ ಚೂಡಿದಾರದ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Kodi Mutt Swamiji: ಕೋಡಿಶ್ರೀ ನುಡಿದ್ರು ಮತ್ತೊಂದು ಭವಿಷ್ಯವಾಣಿ!!! ಸಂಕ್ರಾಂತಿಗೆ ಈ ಅವಘಡ ಸಂಭವ!!!

You may also like

Leave a Comment