Home » Udupi: ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಸಿಡಿಲು ಬಡಿದು ಯುವಕ ಮೃತ್ಯು

Udupi: ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಸಿಡಿಲು ಬಡಿದು ಯುವಕ ಮೃತ್ಯು

by Praveen Chennavara
1 comment

Udupi: ಮೊಬೈಲ್‌ ಪೋನ್‌ನಲ್ಲಿ ಮಾತನಾಡುತ್ತಿದ್ದಾಗ ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟ ಘಟನೆ ಕೋಟ (kota, Udupi) ಆವರ್ಸೆ ಸಮೀಪ ಕಿರಾಡಿಯಲ್ಲಿ ರವಿವಾರ ರಾತ್ರಿ ಸಂಭವಿಸಿದೆ.

ಮೃತವ್ಯಕ್ತಿಯನ್ನು ಕಿರಾಡಿ ಹಂಚಿನಮನೆ ನಿವಾಸಿ, ಬಾಬಣ್ಣ ಶೆಟ್ಟಿ ಹಾಗೂ ಬೇಬಿ ಶೆಡ್ತಿಯವರ ಪುತ್ರ ಪ್ರಮೋದ್‌ ಶೆಟ್ಟಿ ( 24) ಎಂದು ಗುರುತಿಸಲಾಗಿದೆ.

ಪ್ರಮೋದ್ ಶೆಟ್ಟಿ ಮನೆಯ ಹೊರಗೆ ಮೊಬೈಲ್‌ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದು, ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟರು ಎನ್ನಲಾಗಿದೆ.

ಮೃತರು ಇಬ್ಬರು ಸಹೋದರನ್ನು ಅಗಲಿದ್ದಾನೆ.

ಇದನ್ನೂ ಓದಿ: ಪಾನ್ ಕಾರ್ಡ್ ಕಳೆದು ಹೋದ್ರೆ ಟೆನ್ಷನ್ ಬೇಡ- ಕೂತಲ್ಲೇ ಆನ್ಲೈನ್ ಅಲ್ಲಿ ಸುಲಭವಾಗಿ ಡೌನ್ ಲೋಡ್ ಮಾಡಿ

You may also like

Leave a Comment