Home » ಕರಾವಳಿಯಲ್ಲಿ ಸುರಿಯಿತು ‘ಹಳದಿ ಮಳೆ’ !! | ಕಲೆಯಾಗಿ ಉಳಿದಿರುವ ಈ ಮಳೆಹನಿಗೆ ಆತಂಕಗೊಂಡ ಜನತೆ

ಕರಾವಳಿಯಲ್ಲಿ ಸುರಿಯಿತು ‘ಹಳದಿ ಮಳೆ’ !! | ಕಲೆಯಾಗಿ ಉಳಿದಿರುವ ಈ ಮಳೆಹನಿಗೆ ಆತಂಕಗೊಂಡ ಜನತೆ

by ಹೊಸಕನ್ನಡ
0 comments

ಮಳೆಯೆಂದರೆ ಎಲ್ಲರಿಗೂ ಒಂಥರಾ ಖುಷಿ. ಮಳೆಯ ವಾತಾವರಣ ಮನಸ್ಸಿಗೆ ಮುದ ನೀಡುವಂತಹದ್ದು. ಆದರೆ ಇತ್ತೀಚೆಗೆ ಕರಾವಳಿ ಭಾಗದಲ್ಲಿ ಮಳೆಯ ಮಾಮೂಲಿಯಾಗಿ ಹೋಗಿಬಿಟ್ಟಿದೆ. ಸಂಜೆಯಾದರೆ ಸಾಕು ಪ್ರತಿದಿನ ಮಳೆ ಹಾಜರ್. ಹೀಗಿರುವಾಗ ವಿಚಿತ್ರವಾದ ಮಳೆಯೊಂದು ನಿನ್ನೆ ಕರಾವಳಿಯಲ್ಲಿ ಸುರಿದಿದೆ.

ಕೋಟೇಶ್ವರದ ಕಡಲ ತೀರದ ನಿವಾಸಿ ಓರ್ವರ ಮನೆಯ ಮೇಲೆ ಹಳದಿ ಮಿಶ್ರಿತ ಬಣ್ಣದ ಮಳೆಯ ಹನಿ ಸುರಿದಿದೆ. ಈ ದೃಶ್ಯ ಎಲ್ಲರಿಗೆ ಆಶ್ಚರ್ಯ ಉಂಟುಮಾಡಿದೆ. ಇದರ ಜೊತೆ ಜೊತೆಗೆ ಆತಂಕವೂ ಮನೆಮಾಡಿದೆ.

ಇಲ್ಲಿನ ನಿವಾಸಿ ಪುಂಡಲೀಕ ಬಂಗೇರ ಅವರ ಮನೆಯ ಸ್ಲ್ಯಾಬ್ ಹಾಗೂ ಒಣಗಿಸಲು ಹಾಕಿರುವ ಬಟ್ಟೆ ಸಹಿತ ಗಿಡಮರಗಳ ಎಲೆಯ ಮೇಲೆ ಹಳದಿ ಮಿಶ್ರಿತ ಮಳೆ ನೀರು ಬಿದ್ದಿದೆ. ಮನೆಯವರು ಬಟ್ಟೆ ಒಣಗಿಸಲು ಹಾಕಿದ್ದ ಬಿಳಿ ಬಟ್ಟೆಯ ಮೇಲೆ ಹಳದಿ ಮಳೆ ನೀರು ಬಿದ್ದಿದ್ದು ಎಷ್ಟೇ ಸ್ವಚ್ಚಗೊಳಿಸಿದರೂ ಹೋಗುತ್ತಿಲ್ಲ. ಹಾಗಾಗಿ ಇದು ಇನ್ನಷ್ಟು ಆತಂಕ ತಂದಿಟ್ಟಿದೆ.

ಈ ಮಳೆ ನೀರು ಸುಮಾರು 100 ಮೀ. ವ್ಯಾಪ್ತಿಯವರೆಗೂ ಪಸರಿಸಿದೆ. ಈ ಹಿಂದೆ ಒಮ್ಮೆ ಅಮಾವಾಸ್ಯೆಬೈಲು ಪರಿಸರದಲ್ಲೂ ಈ ರೀತಿ ಹಳದಿ ಮಳೆ ನೀರು ಬಿದ್ದಿತ್ತು. ವಾತಾವರಣದಲ್ಲಿ ರಾಸಾಯನಿಕ ವಸ್ತು ಮಿಶ್ರಣಗೊಂಡು ಈ ರೀತಿಯ ಮಳೆ ಹನಿ ಬಿದ್ದಿರಬಹುದೆಂದು ಶಂಕಿಸಲಾಗಿದೆ.

You may also like

Leave a Comment