Home » 50 ರೂಪಾಯಿಯಿಂದ ಹೋಯಿತು ಯುವಕನ ಪ್ರಾಣ!!

50 ರೂಪಾಯಿಯಿಂದ ಹೋಯಿತು ಯುವಕನ ಪ್ರಾಣ!!

0 comments

ಬೆಂಗಳೂರು: ಹಣ ಮನುಷ್ಯನನ್ನು ಯಾವ ಮಟ್ಟಕ್ಕೂ ಕರೆದೊಯ್ಯಬಹುದು ಎಂಬುದಕ್ಕೆ ಈ ಘಟನೆಯೇ ಉದಾಹರಣೆಯಾಗಿದೆ. ಹೌದು. ಕೇವಲ 50 ರೂಪಾಯಿಗಾಗಿ ಸ್ನೇಹಿತನನ್ನೇ ಕೊಲೆ ಮಾಡಿರುವ ಆತಂಕಕಾರಿ ಘಟನೆ ಬಸವೇಶ್ವರ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ.

ಕೊಲೆಯಾದ ಯುವಕ ಶಿವಮಾಧು ಎಂದು ತಿಳಿದು ಬಂದಿದೆ.

ಶಿವಮಾಧು ಸ್ನೇಹಿತ ಶಾಂತ ಕುಮಾರ್ ಜೊತೆ ಸೈಬರ್ ಸೆಂಟರ್ ಹೋಗಿದ್ದ. ಇಬ್ಬರು ಕ್ರಿಕೆಟ್ ಆಡಿ ಕುರಬರಹಳ್ಳಿ ಸರ್ಕಲ್​ಗೆ ಬಂದಿದ್ದರು. ಈ ವೇಳೆ ಶಾಂತಕುಮಾರ್ ಜೇಬಿನಿಂದ ಶಿವಮಾಧು 50 ರೂಪಾಯಿ ತೆಗೆದಿದ್ದ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಜಗಳ ತಾರಕಕ್ಕೇರಿದಾಗ ಶಾಂತಕುಮಾರ್​ ತನ್ನ ಜೊತೆ ತಂದಿದ್ದ ಚಾಕುವಿನಿಂದ ಶಿವಮಾಧುವಿಗೆ ಇರಿದು ಎಸ್ಕೇಪ್‌ ಆಗಿದ್ದಾನೆ.

ಇತ್ತ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಶಿವಮಾಧುನನ್ನ ಇತರೆ ಸ್ನೇಹಿತರು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ಆಸ್ಪತ್ರೆಗೆ ಹೋಗುವಷ್ಟರಲ್ಲೇ ಆತ ಮೃತಪಟ್ಟಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬಸವೇಶ್ವರ ನಗರ ಠಾಣಾ ಪೊಲೀಸರು ಆರೋಪಿ ಪತ್ತೆಗೆ ಬಲೆ‌ ಬೀಸಿದ್ದಾರೆ. ಒಟ್ಟಾರೆ, ಕೇವಲ 50 ರೂಪಾಯಿ ಒಬ್ಬನ ಪ್ರಾಣವನ್ನೇ ಬಲಿ ಪಡೆದಿದೆ.

You may also like

Leave a Comment