Home » Indira Canteen: ಇಂದಿರಾ ಕ್ಯಾಂಟೀನ್ ಪುನರಾರಂಭ ; ಅಧಿಕಾರಿಗಳಿಂದ ಉಪಹಾರ ಮೆನು ಸಿದ್ಧ! ಜನರಿಗೆ ಸಿಗಲಿದೆ ಭರ್ಜರಿ ಉಪಹಾರ!!

Indira Canteen: ಇಂದಿರಾ ಕ್ಯಾಂಟೀನ್ ಪುನರಾರಂಭ ; ಅಧಿಕಾರಿಗಳಿಂದ ಉಪಹಾರ ಮೆನು ಸಿದ್ಧ! ಜನರಿಗೆ ಸಿಗಲಿದೆ ಭರ್ಜರಿ ಉಪಹಾರ!!

0 comments
Indira Canteen

Indira Canteen: ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟೀನ್ (Indira Canteen), ಕಳೆದ ಕೆಲ ವರ್ಷಗಳಿಂದ ಸೂಕ್ತ ನಿರ್ವಹಣೆ ಇಲ್ಲದೆ ಮುಚ್ಚುವ ಹಂತಕ್ಕೆ ತಲುಪಿತ್ತು. ಕೆಲವು ಕಡೆ ಸಂಪೂರ್ಣ ಮುಚ್ಚಿಹೋಗಿದ್ದವು. ಇದೀಗ ಕಾಂಗ್ರೆಸ್ (congress) ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಇಂದಿರಾ ಕ್ಯಾಂಟೀನ್ ರೀ ಓಪನ್​ಗೆ ಸಿದ್ಧತೆ ನಡೆದಿದೆ.

ಹೌದು, ಇಂದಿರಾ ಕ್ಯಾಂಟೀನ್ ಪುನರಾರಂಭಕ್ಕೆ ಬಿಬಿಎಂಪಿ ಮುಂದಾಗಿದ್ದು, ಇದಕ್ಕಾಗಿ ಅಧಿಕಾರಿಗಳು ಉಪಹಾರದ ಮೆನು ಸಿದ್ಧಪಡಿಸಿದ್ದಾರೆ. ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತರು ಸಂಚಾರಿ ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದ್ದರು. ಇದೀಗ ಕಾಂಗ್ರೆಸ್ ಅಧಿಕಾರದಲ್ಲಿ ಇಂದಿರಾ ಕ್ಯಾಂಟೀನ್’ಗಳ ಪುನರಾರಂಭಿಸಲು ನಿರ್ಧರಿಸಲಾಗಿದೆ.

“ ಪ್ರತಿದಿನ ಒಂದೇ ಮೆನು ಇರುವುದಿಲ್ಲ, ಮೆನು ಬದಲಾಗುತ್ತಲೇ ಇರುತ್ತದೆ. ಉಪಾಹಾರದ ಸಮಯದಲ್ಲಿ ರುಚಿಯಾದ ಉಪ್ಪಿಟ್ಟು, ಕೇಸರಿ ಬಾತ್, ಬಿಸಿಬೇಳೆ ಬಾತ್, ಪೊಂಗಲ್ ಇಡ್ಲಿ ಸೇರಿದಂತೆ ಇತರ ಉಪಹಾರ ನೀಡಲಾಗುತ್ತದೆ” ಎಂದು ಬಿಬಿಎಂಪಿ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ಹೇಳಿದ್ದಾರೆ.

ಕಳೆದ ಬಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಆಯುಕ್ತರು, 175 ಇಂದಿರಾ ಕ್ಯಾಂಟೀನ್‌ಗಳಲ್ಲಿ 163 ಕಾರ್ಯನಿರ್ವಹಿಸುತ್ತಿವೆ. ಆರ್‌ಆರ್‌ನಗರ ವಲಯದಲ್ಲಿ ಆರು ಮತ್ತು ದಕ್ಷಿಣ ವಲಯದಲ್ಲಿ ಮೂರು ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಮಾಹಿತಿ ನೀಡಿದ್ದರು. ಕ್ಯಾಂಟೀನ್ ಸ್ಥಿತಿಗತಿ, ಸ್ವಚ್ಛತೆ ಮತ್ತು ನಿರ್ವಹಣೆಯ ಬಗ್ಗೆ ನಿಗಾ ವಹಿಸಲು ತಿಳಿಸಿದ್ದು, ಎಲ್ಲಾ ವಾರ್ಡ್​ಗಳಲ್ಲೂ ಒಂದೊಂದು ಕ್ಯಾಂಟೀನ್ ಹಾಗೂ ಮೊಬೈಲ್ ಕ್ಯಾಂಟೀನ್ ಓಪನ್ ಮಾಡುವಂತೆ ಸೂಚನೆ ಕೊಡಲಾಗಿದೆ.

ಈ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು “ಸಾರ್ವಜನಿಕರು ಇಂದಿರಾ ಕ್ಯಾಂಟೀನ್‌ಗೆ ಬಂದು ಹೊಟ್ಟೆ ತುಂಬಾ ಊಟ ಮಾಡಿ, ಮನಸ್ಸಿಗೆ ತೃಪ್ತಿಯೆನಿಸಿ ಹೋಗಬೇಕೆಂಬುದು ನಮ್ಮ ಬಯಕೆ. ಈ ಹಿಂದೆ ಬೆಳಗಿನ ಉಪಾಹಾರಕ್ಕೆ 5 ರೂ., ಮಧ್ಯಾಹ್ನದ ಊಟಕ್ಕೆ 10 ರೂ. ಇತ್ತು. ಆದರೆ, ಈಗ ದಿನೋಪಯೋಗಿ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಹಾಗಾಗಿ ಉಪಹಾರದ ಬೆಲೆಯಲ್ಲಿ ಬದಲಾವಣೆ ಆಗಬಹುದು. ಇನ್ನು ಶೀಘ್ರದಲ್ಲಿಯೇ ಇಂದಿರಾ ಕ್ಯಾಂಟೀನ್ ಗಳ ಮರು ಆರಂಭ ಆಗುತ್ತದೆ” ಎಂದು ಹೇಳಿದರು.

ಇದನ್ನೂ ಓದಿ: Aamir Khan 3rd Marriage: ನಟಿ ಫಾತಿಮಾ ಜತೆ ಆಮಿರ್​ ಖಾನ್​ ಮೂರನೇ ಮದುವೆ ; ಟ್ವೀಟ್ ಮಾಡಿ ಸನ್ಸೇಷನ್ ಸೃಷ್ಟಿಸಿದ ಕಮಾಲ್!!

You may also like

Leave a Comment