Home » ಬೆಂಗಳೂರು: ತಾಯಿಯನ್ನು ಕೊಂದು ಸೂಟ್ ಕೇಸ್’ಗೆ ನುಗ್ಗಿಸಿ, ಮೇಲೆ ತಂದೆಯ ಫೋಟೋ ಹಚ್ಚಿ ಪೊಲೀಸ್ ಸ್ಟೇಷನ್ ಗೆ ಬಂದ ಮಗಳು !

ಬೆಂಗಳೂರು: ತಾಯಿಯನ್ನು ಕೊಂದು ಸೂಟ್ ಕೇಸ್’ಗೆ ನುಗ್ಗಿಸಿ, ಮೇಲೆ ತಂದೆಯ ಫೋಟೋ ಹಚ್ಚಿ ಪೊಲೀಸ್ ಸ್ಟೇಷನ್ ಗೆ ಬಂದ ಮಗಳು !

by ಹೊಸಕನ್ನಡ
0 comments
Bengalore

Bengalore :ಬೆಂಗಳೂರಿನಲ್ಲಿ (Bengalore )ಮತ್ತೊಂದು ಘೋರ ದುರ್ಘಟನೆ ನಡೆದಿದ್ದು, ಮಗಳೊಬ್ಬಳು ಸ್ವಂತ ಹೆತ್ತ ತಾಯಿಯನ್ನು ಹತ್ಯೆ ಮಾಡಿ, ಆ ಶವವನ್ನು ಸೂಟ್ ಕೇಸ್ ನಲ್ಲಿ ಹಾಕಿಕೊಂಡು ಠಾಣೆಗೆ ತಂದ ವಿಕ್ಷಿಪ್ತ ಘಟನೆ ನಡೆದಿದೆ.

 

ಬೆಂಗಳೂರಿನ ಮೈಕೋ ಲೇಔಟ್ ಪೊಲೀಸ್ ಠಾಣೆಯ ಬಿಳೇಕಹಳ್ಳಿಯ ಎಂಎಸ್ ಆರ್ ಅಪಾರ್ಟ್ ಮೆಂಟ್ ನಲ್ಲಿ ತಾಯಿ ಮಗಳು ವಾಸವಾಗಿದ್ದರು. ಮಗಳು ಸೋನಾಲಿ ಹಾಗೂ ತಾಯಿ ಬೀವಪಾಲ್ ಜೊತೆಗೆ ವಾಸವಾಗಿದ್ದರು. ಘಟನೆಗೆ ಸ್ಪಷ್ಟ ಕಾರಣ ಇನ್ನೂ ತಿಳಿದುಬರಬೇಕಿದೆ. ಆದರೆ ತನ್ನ ತಾಯಿ ಮತ್ತು ಅತ್ತೆ ನಡುವೆ ಜಗಳದಿಂದ ಬೇಸತ್ತಿದ್ದ ಸೋನಾಲಿ (39) ತನ್ನ ಹೆತ್ತ ತಾಯಿಯನ್ನು ಕೊಲೆ ಮಾಡಿ ಪ್ಯಾಕ್ ಮಾಡಿಕೊಂಡು ಶವವನ್ನು ಠಾಣೆಗೆ ತಂದಿದ್ದಾಳೆ ಎನ್ನಲಾಗಿದೆ.

 

ನಿನ್ನೆ ರಾತ್ರಿ ಕೂಡಾ ಜಗಳವಾಗಿದ್ದು, ಜಗಳದ ಬಳಿಕ ತಾಯಿ ವಯಸ್ಕ ತಾಯಿ ಬೀವಾಪಲ್ (78) ನಿದ್ದೆ ಮಾತ್ರೆ ನುಂಗಿ ಸಾಯುವುದಾಗಿ ಹೇಳಿದ್ದಾರೆ. ತದನಂತರ ತನ್ನ ತಾಯಿಗೆ ಸೋನಾಲಿ 20 ನಿದ್ದೆ ಮಾತ್ರೆ ನುಂಗಿಸಿದ್ದಾಳೆ. ಆ ಬಳಿಕ ಟ್ರ್ಯಾಲಿ ಸೂಟ್ ಕೇಸ್ ನಲ್ಲಿ ತಾಯಿಯ ಶವದ ಜೊತೆಗೆ ತಂದೆಯ ಫೋಟೋ ಅನ್ನು ಸೂಟ್ ಕೇಸ್’ಗೆ ಅಂಟಿಸಿಕೊಂಡು ಇಟ್ಟುಕೊಂಡು ಠಾಣೆಗೆ ಬಂದಿದ್ದಾಳೆ ಎನ್ನಲಾಗಿದೆ. ಮಗಳು ಸೋನಾಲಿಯ ಈ ವಿಕ್ಷಿಪ್ತ ನಡೆಗೆ ಏನು ಕಾರಣ ಎಂದು ತಿಳಿದು ಬಂದಿಲ್ಲ. ಸದ್ಯ ಮೈಕೋಟ್ ಲೇಔಟ್ ಠಾಣೆ ಪೊಲೀಸರು ಸೋನಾಲಿಯನ್ನು ಬಂಧಿಸಿದ್ದು ಸುದೀರ್ಘ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ :ಹನಿಮೂನ್‌ ಮೂಡಲ್ಲಿ ರೂಂ ಒಳಗೆ ಹೋದ ಗಂಡ; ಮರುದಿನ ಹೆಂಡತಿಯ ಅಣ್ಣನಾಗಿ ಹೊರಗಡೆ ಬಂದ!!ರಾತ್ರಿ ಬೆಳಗಾಗೋದ್ರಲ್ಲಿ ನಡೆದದ್ದೇನು?

You may also like

Leave a Comment