Home » 500rupee: ಶ್ರೀರಾಮ, ಮಂದಿರ ಫೋಟೋ ಇರೋ 500ರ ನೋಟು ಬಿಡುಗಡೆ ಕುರಿತು RBI ನಿಂದ ಬಂತು ಬಿಗ್ ಅಪ್ಡೇಟ್!!

500rupee: ಶ್ರೀರಾಮ, ಮಂದಿರ ಫೋಟೋ ಇರೋ 500ರ ನೋಟು ಬಿಡುಗಡೆ ಕುರಿತು RBI ನಿಂದ ಬಂತು ಬಿಗ್ ಅಪ್ಡೇಟ್!!

0 comments
500rupee

500Rupee: ಅಯೋಧ್ಯೆಯಲ್ಲಿ ರಾಮ ಮಂದಿರದೊಳಗೆ ಶ್ರೀರಾಮನ ಪ್ರಾಣ ಪ್ರತಿಷ್ಠೆಗೆ ದಿನಗಣನೆ ಶುರುವಾಗಿದ್ದು, ಇಡೀ ದೇಶ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಆದರೆ ಈ ಬೆನ್ನಲ್ಲೇ ಮಂದಿರ ಉದ್ಘಾಟನೆ ಮೊದಲು 500ರ ನೋಟಿನಲ್ಲಿ ಶ್ರಿರಾಮ ಹಾಗೂ ಅಯೋಧ್ಯೆಯ ರಾಮ ಮಂದಿರ ಫೋಟೋ ಇರುವ 500 ರೂಪಾಯಿ(500 Rupee) ನೋಟ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದೀಗ ನೋಟು ಬಿಡುಗಡೆ ವಿಚಾರವಾಗಿ RBI ಬಿಗ್ ಅಪ್ಡೇಟ್ ನೀಡಿದೆ.

ಇದನ್ನೂ ಓದಿ: Electric cars ಮೇಲೆ ಸಖತ್ ಆಫರ್, ಈಗಲೇ ಖರೀದಿಸಿ!

ಹೌದು, ಅಯೋಧ್ಯಾ ರಾಮ ಮಂದಿರ ಉದ್ಘಾಟನೆಗೆ ದಿನ ಸಮೀಪಿಸುತ್ತಿದ್ದಂತೆ ಗಾಂಧಿ ಬದಲು ಶ್ರೀರಾಮನ ಫೋಟೋ ಇರುವ 500 ರೂ ಮುಖ ಬೆಲೆಯ ನೋಟುಗಳು ಎಲ್ಲೆಡೆ ವೈರಲ್ ಆಗಿವೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾ ಮಹೋತ್ಸವದ ಸಂದರ್ಭದಲ್ಲಿ ರೂ. 500 ನೋಟುಗಳಲ್ಲಿ ಗಾಂಧೀಜಿಯ ಬದಲು ಶ್ರೀರಾಮನ ಚಿತ್ರ ಮುದ್ರಿಸಲಾಗುವುದು ಎಂಬ ಪ್ರಚಾರ ಜೋರಾಗಿದೆ. ಒಂದು ಬದಿಯಲ್ಲಿ ಶ್ರೀರಾಮನ(Shri ram) ಭಾವಚಿತ್ರವನ್ನು ಅಚ್ಚು ಹಾಕಿದರೆ, ನೋಟಿನ ಇನ್ನೊಂದು ಬದಿಯಲ್ಲಿ ಕೆಂಪು ಕೋಟೆಯ ಬದಲಿಗೆ ಅಯೋಧ್ಯೆ ದೇವಾಲಯದ ಮಾದರಿಯನ್ನು ಮುದ್ರಿಸಲಾಗಿದೆ. ಗಾಂಧೀಜಿ ಅವರ ಕನ್ನಡಕ ಬದಲು ಶ್ರೀರಾಮನ ಬಾಣ ಮತ್ತು ಬಿಲ್ಲು ಇರುವಂತೆ ವಿನ್ಯಾಸಗೊಳಿಸಲಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ RBI ಇದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದೆ.

RBI ಹೇಳಿದ್ದೇನು?

ಈ ನೋಟುಗಳನ್ನು ಜನವರಿ 22, 2024 ರಂದು ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು ಎಂಬ ಸುದ್ದಿಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ನೋಟುಗಳ ಚಿತ್ರಗಳನ್ನು ಎಡಿಟ್ ಮಾಡಲಾಗಿದ್ದು, ಹೊಸ ನೋಟುಗಳ ಬಿಡುಗಡೆಗೆ ಸಂಬಂಧಿಸಿದಂತೆ ಈಗ ಚಲಾವಣೆಯಲ್ಲಿರುವ 500 ರೂ.ನೋಟಿನ ಹೊರತಾಗಿ ರಾಮ ಮಂದಿರ ಚಿತ್ರವಿರುವ 500 ರೂ. ನೋಟುಗಳು ಚಲಾವಣೆಗೆ ಬರುವುದಿಲ್ಲ ಎಂದು RBI ಸ್ಪಷ್ಟಪಡಿಸಿದೆ.

You may also like

Leave a Comment