Home » Puttur Election: ಕಾಂಗ್ರೆಸ್ ಪರ ಪ್ರಚಾರಕ್ಕೆ ಮೇ.8 ಕ್ಕೆ ನಟಿ ರಮ್ಯಾ ಪುತ್ತೂರಿಗೆ!

Puttur Election: ಕಾಂಗ್ರೆಸ್ ಪರ ಪ್ರಚಾರಕ್ಕೆ ಮೇ.8 ಕ್ಕೆ ನಟಿ ರಮ್ಯಾ ಪುತ್ತೂರಿಗೆ!

1 comment
Puttur Election

Puttur Election: ಚುನಾವಣೆಯ (Karnataka Election 2023) ಕಾವು ಎಲ್ಲೆಡೆ ಗರಿಗೆದರಿದೆ. ಪಕ್ಷ ಗೆಲ್ಲಲು ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿದ್ದಾರೆ. ಮೇ 10 ರಂದು ರಾಜ್ಯ ವಿಧಾನಸಭಾ ಚುನಾವಣೆ (Assembly Election) ನಡೆಯಲಿದ್ದು, ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ.

ಸದ್ಯ ಚುನಾವಣೆ ಹಿನ್ನೆಲೆ ಬಿಜೆಪಿ-ಕಾಂಗ್ರೆಸ್ (BJP-Congress) ಸೇರಿದಂತೆ ಇತರೆ ಪಕ್ಷಗಳು ಪ್ರಚಾರದ ಮೂಲಕ ಜನರನ್ನು ಸೆಳೆಯುವತ್ತ ಗಮನಹರಿಸುತ್ತಿದ್ದು, ಇದೀಗ ಕಾಂಗ್ರೆಸ್ ಪರ ಪ್ರಚಾರಕ್ಕೆ ಸ್ಯಾಂಡಲ್ ವುಡ್ ನಟಿ ರಮ್ಯಾ (Actress Ramya) ಮಂಗಳೂರಿನ (mangalur) ಪುತ್ತೂರಿಗೆ (Puttur Election) ಭೇಟಿ ನೀಡಲಿದ್ದಾರೆ.

ಮೇ.8 ರಂದು ಪುತ್ತೂರು ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ (Ashok Rai) ಪರ ರೋಡ್ ಶೋ ರಾಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಪಾಲ್ಗೊಳ್ಳಲಿದ್ದಾರೆ. ಹಾಗೇ “ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ” ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ.ರಾಜಾರಾಂ ಕೆ ಬಿ ಹೇಳಿದ್ದಾರೆ.

ಅಲ್ಲದೆ, ಚುನಾವಣೆ ಹಿನ್ನೆಲೆ ಉತ್ತರ ಪ್ರದೇಶದ (uttar pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಮೇ 6ಕ್ಕೆ ಪುತ್ತೂರಿಗೆ (Yogi Visit to Puttur) ಭೇಟಿ ನೀಡಲಿದ್ದಾರೆ. ದಕ್ಷಿಣ ಕನ್ನಡ (dakshina Kannada) ಮತ್ತು ಉಡುಪಿ (Udupi) ಜಿಲ್ಲೆಯಲ್ಲಿ ಬಿಜೆಪಿ (bjp) ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.

 

ಇದನ್ನು ಓದಿ: Sharad Pawar: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ಟ್ವಿಸ್ಟ್! NCP ಮುಖ್ಯಸ್ಥ ಸ್ಥಾನಕ್ಕೆ ಶರದ್‌ ಪವಾರ್‌ ರಾಜೀನಾಮೆ! ಬಿಜೆಪಿ ಸೇರೋದು ಪಕ್ಕಾನಾ? 

You may also like

Leave a Comment