Home » Mallikharjun Kharge: ಇಂದಿರಾ ಗಾಂಧಿ ಎದುರು ಅಮಿತ್ ಶಾ ಇನ್ನೂ ಬಚ್ಚಾ – ಖರ್ಗೆ ವಾಗ್ದಾಳಿ

Mallikharjun Kharge: ಇಂದಿರಾ ಗಾಂಧಿ ಎದುರು ಅಮಿತ್ ಶಾ ಇನ್ನೂ ಬಚ್ಚಾ – ಖರ್ಗೆ ವಾಗ್ದಾಳಿ

1 comment

Mallikharjun Kharge: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikharjun Kharge), ಶಾ ವಿರುದ್ಧ ಹರಿಹಾಯ್ದಿದ್ದು, ಇಂದಿರಾಗಾಂಧಿಯವರ ಎದುರು ಅಮಿತ್ ಶಾ ಬಚ್ಚಾ ಎಂದು ವಾಗ್ದಾಳಿ ನಡೆಸಿದ್ದಾರೆ.

ಹೌದು, ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಅಮಿತ್‌ ಶಾ(Amith Shah)ನಿರತರಾಗಿದ್ದಾರೆ. ಈ ವೇಳೆ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು ಸ್ವತಃ ಇಂದಿರಾ ಗಾಂಧಿ ಅವರೇ ಸ್ವರ್ಗದಿಂದ ಇಳಿದು ಬಂದರೂ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯನ್ನು ಮರುಸ್ಥಾಪನೆ ಮಾಡುವುದಿಲ್ಲ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಈ ಹೇಳಿಕೆಗೆ ತಿರುಗೇಟು ನೀಡಿರುವ ಮಲ್ಲಿಕಾರ್ಜುನ್‌ ಖರ್ಗೆ ‘ಇಂದಿರಾ ಗಾಂಧಿಯವರ ಎದುರು ಅಮಿತ್‌ ಶಾ ಇನ್ನೂ ಬಚ್ಚಾ’ ಎಂದು ಲೇವಡಿ ಮಾಡಿದ್ದಾರೆ. ಬಿಜೆಪಿ, ಏಕನಾಥ ಶಿಂಧೆ ಬಣ ಶಿವಸೇನೆ, ಅಜಿತ್‌ ಎನ್‌ಸಿಪಿ ಬಣದ ಸರ್ಕಾರ ಕಳ್ಳರ ಸರ್ಕಾರ ಎಂದು ಲೇವಡಿ ಮಾಡಿದ್ದಾರೆ.

You may also like

Leave a Comment