Home » Lokasaba Speaker: ಆಂಧ್ರ ಬಿಜೆಪಿ ಅಧ್ಯಕ್ಷೆ ಪುರಂದೇಶ್ವರಿ ಲೋಕಸಭೆಯ ಸ್ಪೀಕರ್ – ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯೋ ಪ್ಲಾನ್ ಮಾಡಿದ ಬಿಜೆಪಿ !!

Lokasaba Speaker: ಆಂಧ್ರ ಬಿಜೆಪಿ ಅಧ್ಯಕ್ಷೆ ಪುರಂದೇಶ್ವರಿ ಲೋಕಸಭೆಯ ಸ್ಪೀಕರ್ – ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯೋ ಪ್ಲಾನ್ ಮಾಡಿದ ಬಿಜೆಪಿ !!

0 comments
Lokasaba Speaker

Lokasaba Speaker: ಲೋಕಸಭಾ ಚುನಾವಣೆ ಮುಗಿದು, ಬಿಜೆಪಿ ಗರ್ವಭಂಗವಡಗಿ ಎನ್ ಡಿ ಎ ಮೈತ್ರಿ ಕೂಟ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮೂರನೇ ಬಾರಿಗೆ ನರೇಂದ್ರ ಮೋದಿ(Narendra modi) ಪ್ರಧಾನಿಯಾಗಿ ಹಾಗೂ 7 ಪ್ರಮಾಣವಚನ ಸ್ವೀಕಾರ ಮಾಡಿ, ಖಾತೆ ಹಂಚಿಕೆಯೂ ಮುಗಿದಿದೆ. ಆದರೀಗ ಉಳಿದಿರುವುದು ಸ್ಪೀಕರ್ ಹುದ್ದೆ ಮಾತ್ರ. ಹೀಗಾಗಿ ಲೋಕಸಭಾ ಸಭಾಧ್ಯಕ್ಷರು(Lokasaba Speaker) ಯಾರಾಗಬಹುದು ಎಂಬ ಕುತೂಹಲ ಕೆರಳಿದೆ. ಆದರೀಗ ಬಿಜೆಪಿ ಜಾಣ ಹೆಜ್ಜೆ ಇಟ್ಟಿದ್ಧು ಆಂಧ್ರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷೆ ಪುರಂದೇಶ್ವರಿಯನ್ನು ಈ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಒಂದು ಕಲ್ಲಲ್ಲಿ ಎರಡು ಹಕ್ಕಿಯನ್ನು ಹೊಡೆಯಲು ತೀರ್ಮಾನ ಮಾಡಿದೆ ಎನ್ನಲಾಗಿದೆ.

ಹೌದು, ಲೋಕಸಭೆಯ ಸ್ಪೀಕರ್‌ ಹುದ್ದೆಯನ್ನು NDA ಮಿತ್ರ ಪಕ್ಷಗಳು ತಮಗೆ ಬೇಕೆಂದು ಬೇಡಿಕೆ ಇಟ್ಟಿದ್ದವು. ಆದರೆ ಬಿಜೆಪಿ(BJP) ಮಾತ್ರ ತನ್ನಲ್ಲೇ ಉಳಿಸಿಕೊಳ್ಳಲು ಭರ್ಜರಿ ಬಾಣ ಪ್ರಯೋಗಿಸಿದ್ದು, ಅದು ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಲೋಕಸಭೆಯ ನೂತನ ಸ್ಪೀಕರ್‌ ಹುದ್ದೆಯನ್ನು ಹಾಲಿ ರಾಜಮಂಡಿ ಕ್ಷೇತ್ರದ ಸಂಸದೆ ಮತ್ತು ಆಂಧ್ರಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷೆ(Andrapradesh BJP State President) ಡಿ.ಪುರಂದೇಶ್ವರಿಗೆ(D Purandeshwari) ನೀಡುವ ಸಾಧ್ಯತೆ ಇದೆ. ಈ ಚಾಣಾಕ್ಷ ನಡೆಯಿಂದ ಬಿಜೆಪಿ ಒಂದು ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು ಮುಂದಾಗಿದೆ.

Yuvaraj Divorce Case: ಯುವರಾಜ್ – ಶ್ರೀದೇವಿ ಡೈವೋರ್ಸ್ ಜಗಳದಲ್ಲಿ ಕಾಂತಾರ ನಟಿ ಸಪ್ತಮಿ ಗೌಡ ಹೆಸರು- ಸ್ಫೋಟಕ ವಿಷ್ಯ ಹೊರ ಹಾಕಿದ ಪತ್ನಿ !

ಪುರಂದೇಶ್ವರಿ ಅವರು ಎನ್‌ಡಿಎಯ(NDA) ಪ್ರಮುಖ ಮೈತ್ರಿಪಕ್ಷ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಎನ್.ಚಂದ್ರಬಾಬುನಾಯ್ಡು(Chandrababu Naidu) ಅವರ ಹತ್ತಿರದ ಬಂಧುವು ಆಗಿದ್ದಾರೆ. ಆರಂಭದಲ್ಲಿ ನಾಯ್ಡು ಅವರು ಎರಡು ಸಚಿವ ಸ್ಥಾನದ ಜೊತೆಗೆ ಸ್ಪೀಕ‌ರ್ ಸ್ಥಾನಕ್ಕೂ ಬೇಡಿಕೆ ಇಟ್ಟಿದ್ದರು. ಅವರು ಈಗ ಬಿಜೆಪಿ ಪುರಂದೇಶ್ವರಿ ಹೆಸರನ್ನು ಪರಿಗಣಿಸಿದರೆ ಆಗಬಹುದು ಎಂಬ ನಿಲುವು ಹೊಂದಿದ್ದಾರೆ ಎನ್ನಲಾಗಿದೆ.

ಇನ್ನು ಪುರಂದರೇಶ್ವರಿ ಅವರನ್ನು ಸ್ಪೀಕರ್‌ ಸ್ಥಾನಕ್ಕೆ ಕೂರಿಸಿದರೆ ಸರ್ಕಾರ ಮಹಿಳೆಯರ ಪರವಾಗಿ ಇದೆ ಎಂಬ ಸಂದೇಶವನ್ನು ರವಾನಿಸದಂತಾಗುತ್ತದೆ. ಅಷ್ಟೇ ಅಲ್ಲದೇ ಮಿತ್ರ ಪಕ್ಷವಾದ ಟಿಡಿಪಿ, ಜನಸೇನಾ ಸೇರಿದಂತೆ ಯಾವುದೇ ಪಕ್ಷಗಳು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇಲ್ಲ ಎಂಬ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.

ನಾಯ್ಡು ವಿರೋಧ ಯಾಕಿರುವುದಿಲ್ಲ?
ಪುರಂದೇಶ್ವರಿ ಟಿಡಿಪಿ(TDP) ಸಂಸ್ಥಾಪಕ ಎನ್‌.ಟಿ.ರಾಮರಾವ್‌ ಅವರ ಪುತ್ರಿ. ಪುರಂದೇಶ್ವರಿ ಅವರ ಸೋದರಿಯನ್ನೇ ಚಂದ್ರಬಾಬು ನಾಯ್ಡು ಮದುವೆಯಾಗಿರುವುದು. ಅವರು ನಾಯ್ಡು ಅವರ ನಾದಿನಿ ಆದರೂ ಬಿಜೆಪಿಯಿಂದ ಸಂಸದರಾಗಿ ಆಯ್ಕೆ ಆಗಿದ್ದಾರೆ. ಅಲ್ಲದೆ ಆಂಧ್ರದಲ್ಲಿ ಬಿಜೆಪಿ ಮತ್ತು ಟಿಡಿಪಿ, ಜನಸೇನಾ ಮೈತ್ರಿಯಾಗಲು ಪುರಂದೇಶ್ವರಿ ಪಾತ್ರ ದೊಡ್ಡದು. ಈ ಕಾರಣಕ್ಕೆ ಪುರಂದೇಶ್ವರಿ ಹೆಸರು ಈಗ ಮುನ್ನೆಲೆಗೆ ಬಂದಿದೆ. ಹೀಗಾಗಿ ಪುರಂದೇಶ್ವರಿ ಆಯ್ಕೆಯನ್ನು ನಾಯ್ಡು ಕೂಡಾ ವಿರೋಧಿಸುವುದಿಲ್ಲ. ಜೊತೆಗೆ ಹುದ್ದೆಯೂ ಬಿಜೆಪಿಯಲ್ಲೇ ಉಳಿಯುತ್ತದೆ ಎನ್ನುವುದು ಬಿಜೆಪಿ ತಂತ್ರ ಎನ್ನಲಾಗಿದೆ.

Ayodhya: ಬಿಜೆಪಿ ಸೋಲಿಸಿದಕ್ಕೆ ಮುಸ್ಲಿಂ ವೇಷ ಹಾಕಿ ಅಯೋಧ್ಯೆ ಹಿಂದೂಗಳನ್ನು ಟೀಕಿಸಿದ್ದ ವ್ಯಕ್ತಿ ಅರೆಸ್ಟ್ !!

You may also like

Leave a Comment