Home » Anita Kumaraswamy : ಈ ನನ್ನ ಗಂಡ ಮಕ್ಕಳಂತೆ ಹಠ ಮಾಡ್ತಾರೆ, ಹೇಳಿದ್ದೇನು ಕೇಳಲ್ಲ! ಆಸ್ಪತ್ರೆ ಸೇರಿದ ಬೆನ್ನಲ್ಲೇ ಎಚ್ಡಿಕೆ ಮೇಲೆ ಅನಿತಾ ಕುಮಾರಸ್ವಾಮಿ ಆರೋಪ!

Anita Kumaraswamy : ಈ ನನ್ನ ಗಂಡ ಮಕ್ಕಳಂತೆ ಹಠ ಮಾಡ್ತಾರೆ, ಹೇಳಿದ್ದೇನು ಕೇಳಲ್ಲ! ಆಸ್ಪತ್ರೆ ಸೇರಿದ ಬೆನ್ನಲ್ಲೇ ಎಚ್ಡಿಕೆ ಮೇಲೆ ಅನಿತಾ ಕುಮಾರಸ್ವಾಮಿ ಆರೋಪ!

by ಹೊಸಕನ್ನಡ
0 comments
Anita Kumaraswamy

Anita Kumaraswamy-HDK: ತಮ್ಮ ಪತಿ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಯವರಿಗೆ ಜ್ವರ ಬಂದು ಎರಡು ದಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರಿಂದ ಪತಿಯ ಪರವಾಗಿ ಚನ್ನಪಟ್ಟಣದಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಮತಯಾಚನೆ ಮಾಡುತ್ತಿದ್ದಾರೆ. ಈ ವೇಳೆ ಅನಿತಾ (Anita Kumaraswamy-HDK) ಅವರು ತಮ್ಮ ಗಂಡನ ಕುರಿತು ಆಪಾದನೆ ಮಾಡಿದ್ದಾರೆ.

ಹೌದು, ನನ್ನ ಪತಿರಾಯ, ನಿಮ್ಮೆಲ್ಲರ ನೆಚ್ಚಿನ ನಾಯಕ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರು ಮಕ್ಕಳಂತೆ ಹಠ ಮಾಡ್ತಾರೆ, ಸರಿಯಾಗಿ ಊಟಾನೆ ಮಾಡಲ್ಲ ಎಂದು ಪತ್ನಿ ಅನಿತಾ ಕುಮಾರಸ್ವಾಮಿ (Anita Kumaraswamy) ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಮತಯಾಚನೆ ಮಾಡುವಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಊಟದ ವಿಚಾರದಲ್ಲಿ ಮಕ್ಕಳಂತೆ ಹಠ ಮಾಡುತ್ತಾರೆ. ಬರೀ ಮೊಸರನ್ನ ತಿನ್ನುತ್ತಾರೆ. ಹೆಚ್ಚು ನೀರು ಕುಡಿಯಲ್ಲ, ಸರಿಯಾಗಿ ಊಟ ಮಾಡಲ್ಲ. ಹೀಗಾಗಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಾಗಿ ಒಂದು ದಿನ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸದ್ಯ ಸ್ವಲ್ಪ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಬಳಿಕ ಮಾತನಾಡಿದ ಅವರು ನಾನು ಚನ್ನಪಟ್ಟಣದಾದ್ಯಂತ ಪ್ರಚಾರ ಮಾಡ್ತಿದ್ದೇನೆ. ಕ್ಷೇತ್ರದ ಜನರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಅಲ್ಲದೇ ಜನ ಕೂಡಾ ಬುದ್ಧಿವಂತರಿದ್ದಾರೆ. ಅವರು ಕುಮಾರಸ್ವಾಮಿ ಅವರನ್ನ ಅರ್ಥ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಸಿಎಂ ಕ್ಯಾಂಡಿಡೇಟ್ ಹಾಗಾಗಿ ಅವರು ಗೆದ್ದರೆ ಕ್ಷೇತ್ರಕ್ಕೆ ಅನ್ಲಿಮಿಟೆಡ್ ಅನುದಾನ ಸಿಗುತ್ತೆ. ಹಾಗಾಗಿ ನಮಗೆ ಮತ್ತೊಮ್ಮೆ ಅವಕಾಶ ಕೊಡ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಇನ್ನು ಚನ್ನಪಟ್ಟಣದಲ್ಲಿ ಏ. 30ರಂದು ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ಸಮಾರಂಭ ನಡೆಯುವುದರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅನಿತಾ ಕುಮಾರಸ್ವಾಮಿ, “ನರೇಂದ್ರ ಮೋದಿಯವರು ದೇಶದ ಪ್ರಧಾನಿ, ಅವರ ಮೇಲೆ ಗೌರವ ಇದೆ. ಚನ್ನಪಟ್ಟಣಕ್ಕೆ ಪ್ರಧಾನಿ ಮೋದಿ ಬರ್ತಿರೋದಕ್ಕೆ ಸ್ವಾಗತ ಇದೆ. ಅವರು ಪ್ರಚಾರ ಮಾಡುವುದಾದರೆ ಮಾಡಲಿ. ಆದರೆ, ಅವರು ಏನು ಹೇಳುತ್ತಾರೆ, ಕುಮಾರಸ್ವಾಮಿ ಏನು ಹೇಳುತ್ತಾರೆ ಎಂಬುದು ಜನತೆಗೆ ಗೊತ್ತಿದೆ.

ಇದನ್ನೂ ಓದಿ: Pini Village Culture: ಭಾರತದ ಈ ಹಳ್ಳಿಯಲ್ಲಿ ಮಹಿಳೆಯರು ಬಟ್ಟೆನೇ ಧರಿಸಲ್ವಂತೆ! ಅಪ್ಪಿ ತಪ್ಪಿ ಧರಿಸಿದರೂ ಇವರು ಬಂದು ಹೊತ್ತೊಯ್ತಾರಂತೆ!

You may also like

Leave a Comment