Anna Bhagya Scheme: ರಾಜ್ಯ ಸರಕಾರದ(Government)ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಅನ್ನಭಾಗ್ಯ ಯೋಜನೆಯಡಿಯಲ್ಲಿ(Anna Bhagya Scheme) ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ(Ration Card Holder)ಪ್ರತಿ ಸದಸ್ಯರಿಗೆ 5 ಕೆಜಿಯ ಹಾಗೆ ಆಹಾರಧಾನ್ಯಗಳನ್ನು ವಿತರಣೆ ಮಾಡಲಾಗುತ್ತದೆ.
ಸರ್ಕಾರದ ಗ್ಯಾರಂಟಿ ಯೋಜನೆಯಡಿ 5 ಕೆ.ಜಿ ಅಕ್ಕಿ ಬದಲಿಗೆ ಪಡಿತರ ಚೀಟಿದಾರರಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಈ ನಡುವೆ, ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಹೆಚ್ಚುವರಿ 5 ಕೆಜಿ ಅಕ್ಕಿ ವಿಳಂಬವಾಗಲಿರುವ ಕುರಿತು ಸುಳಿವು ನೀಡಿದ್ದಾರೆ.
ರೈತರಿಂದ ಅಕ್ಕಿ ಖರೀದಿ ಮಾಡುವ ಪ್ರಶ್ನೆಯೇ ಸರ್ಕಾರದ ಮುಂದೆ ಇಲ್ಲ. ರೈಸ್ ಮಿಲ್ ಗಳ ಮುಖಾಂತರ ಮಾತ್ರವೇ ಅಕ್ಕಿ ಖರೀದಿ ಮಾಡುವ ಯೋಜನೆಯಿದೆ. ಬೇರೆ ರಾಜ್ಯಗಳಿಂದಲೂ ಅಕ್ಕಿ ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ ಸಚಿವರು ಇದೆ ವೇಳೆ ತಿಳಿಸಿದ್ದಾರೆ. ಈ ನಡುವೆ, ಅಕ್ಕಿ ಸಾಗಿಸುವ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳಿದ್ದು, ಪ್ರತಿ ತಿಂಗಳು ದೊಡ್ಡ ಪ್ರಮಾಣದಲ್ಲಿ ಅಕ್ಕಿ ಖರೀದಿ ಸುಲಭದ ಮಾತಲ್ಲ. ಹೀಗಾಗಿ ಅಕ್ಕಿ ಖರೀದಿ ಪ್ರಕ್ರಿಯೆ ಇನ್ನಷ್ಟು ಸಮಯ ಹಿಡಿಯುವ ಕುರಿತು ಸಚಿವರಾದ ಮುನಿಯಪ್ಪ ಹೇಳಿದ್ದಾರೆ.
ಇದನ್ನು ಓದಿ: Gruha Lakshmi Yojana: ಸರ್ಕಾರದ ವಿರುದ್ಧ ರೊಚ್ಚಿಗೆದ್ದ ‘ಗೃಹಲಕ್ಷ್ಮೀ’ ಮಹಿಳೆಯರು – ಕಾರಣವೇನು ?!
