Home » Ashok Rai: ಪುತ್ತೂರು : ಪೊಲೀಸ್ ದೌರ್ಜನ್ಯ ಆರೋಪ ,ತಪ್ಪಿತಸ್ಥರನ್ನು ಸಂಜೆಯೊಳಗೆ ಅಮಾನತು ಮಾಡಲು ಸೂಚನೆ -ಅಶೋಕ್ ರೈ

Ashok Rai: ಪುತ್ತೂರು : ಪೊಲೀಸ್ ದೌರ್ಜನ್ಯ ಆರೋಪ ,ತಪ್ಪಿತಸ್ಥರನ್ನು ಸಂಜೆಯೊಳಗೆ ಅಮಾನತು ಮಾಡಲು ಸೂಚನೆ -ಅಶೋಕ್ ರೈ

by Praveen Chennavara
0 comments
Ashok Rai

Ashok Rai: ಪುತ್ತೂರು; ಪುತ್ತೂರಿನಲ್ಲಿ ಬ್ಯಾನರಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಏಳು ಮಂದಿ ಆರೋಪಿಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ ಎಂಬ ಮಾಹಿತಿ ಇದ್ದು ಪ್ರಕರಣದ ಬಗ್ಗೆ ಕೂಲಂಕುಶ ತನಿಖೆ ನಡೆಸಿ ತಪ್ಪತಸ್ಥರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು ಮತ್ತು ಇಂದು ಸಂಜೆಯೊಳಗೆ ಅಮಾನತು ಮಾಡಬೇಕು ಎಂದು ಪುತ್ತೂರು ಶಾಸಕ ಅಶೋಕ್‌ ಕುಮಾರ್ ರೈ (Ashok Rai) ಕೋಡಿಂಬಾಡಿ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿರುವ ಶಾಸಕರು ದೂರವಾಣಿ ಮೂಲಕ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು ಪ್ರಕರಣದ ಬಗ್ಗೆ ಇಲಾಖಾವಾರು ತನಿಖೆ ನಡೆಸಬೇಕು. ಪ್ರಕರಣದಲ್ಲಿ ಯಾರು ತಪ್ಪಿತಸ್ಥರಾದರೂ ಅವರ ವಿರುದ್ಧ ಕಠಿಣಕ್ರಮಕೈಗೊಳ್ಳಬೇಕು. ಇವತ್ತು ಸಂಜೆ 3 ಗಂಟೆ ಯೊಳಗೆ ಹಲ್ಲೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವ ಮೂಲಕ ಅವರನ್ನು ಸಸ್ಪೆಂಡ್ ಮಾಡಬೇಕು ಎಂದು ಸೂಚನೆಯನ್ನು ನೀಡಿದ್ದಾರೆ.

ಬ್ಯಾನರ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ ನರಿಮೊಗರು ಗ್ರಾಮದ 9 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ.

 

ಇದನ್ನು ಓದಿ: Lahari Pathivada: ಅಮೆರಿಕಾದಲ್ಲಿ ಕೆಲಸಕ್ಕೆ ಹೋಗಿದ್ದ ಭಾರತೀಯ ಮೂಲದ ಯುವತಿ ಶವವಾಗಿ ಪತ್ತೆ ; ಅಷ್ಟಕ್ಕೂ ಏನಾಯ್ತು ಈಕೆಗೆ?! 

You may also like

Leave a Comment