Home » Rama Mandir: ರಾಮಮಂದಿರದ ಮೇಲೆ ಇಸ್ಲಾಂ ಧರ್ಮದ ಧ್ವಜ ಹಾರಿಸಿದ ಮುಸ್ಲಿಂ ವ್ಯಕ್ತಿ!!

Rama Mandir: ರಾಮಮಂದಿರದ ಮೇಲೆ ಇಸ್ಲಾಂ ಧರ್ಮದ ಧ್ವಜ ಹಾರಿಸಿದ ಮುಸ್ಲಿಂ ವ್ಯಕ್ತಿ!!

0 comments
Rama Mandir

ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠೆ ಇಂದು ಮಾಡಲಾಗುತ್ತಿದೆ. ಗದಗ ಜಿಲ್ಲೆಯ ಕಿಡಿಗೇಡಿಯೊಬ್ಬ ರಾಮಮಂದಿರದ ಮೇಲೆ ಮುಸ್ಲಿಂ ಧ್ವಜಗಳನ್ನು ಹಾರಿಸುವಂತಹ ನಕಲಿ ಧ್ವಜಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಘಟನೆಯೊಂದು ನಡೆದಿದೆ. ಇದು ಹಿಂದೂಗಳ ಭಾವನೆಗೆ ಧಕ್ಕೆ ತಂದ ಬೆನ್ನಲ್ಲಿಯೇ ಪೊಲೀಸರು ಮುಸ್ಲಿಂ ಯುವಕನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Kangana Ranaut: ರೇಷ್ಮೆ ಸೀರೆ, ಕೂಲಿಂಗ್ ಗ್ಲಾಸ್ ಧರಿಸಿ ಅಯೋಧ್ಯೆಯಲ್ಲಿ ನೆಲ ಗುಡಿಸಿದ ಕಂಗನಾ!!

ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಹಿಂದೂ ಪರ ಸಂಘಟನೆಗಳು ಪೊಲೀಸರಿಗೆ ದೂರನ್ನು ನೀಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದೆ.

ಗದಗ ಜಿಲ್ಲೆಯ ಗಜೇಂದ್ರಗಡ ಪೊಲೀಸರು ತಾಜುದ್ದೀನ್‌ ದಫೆದಾರ್‌ ಎಂಬಾತನನ್ನು ವಶಕ್ಕೆ ಪಡೆದಿರುವ ಕುರಿತು ವರದಿಯಾಗಿದೆ. ವಶಕ್ಕೆ ಪಡೆದ ಯುವಕನಿಂದ ಪೋಸ್ಟ್‌ ಡಿಲೀಟ್‌ ಮಾಡಿಸಿದ್ದಾರೆ. ಪೊಲೀಸ್‌ ಇಲಾಖೆ ಕಾನೂನು ಕ್ರಮ ಕೈಗೊಳ್ಳುವ ಕುರಿತು ಭರವಸೆ ನೀಡಿದೆ ಎಂದು ವರದಿಯಾಗಿದೆ.

You may also like

Leave a Comment