Home » Basavaraj bommai: ಕಾಂಗ್ರೆಸ್‌ ಕೊಡುವ ಹಣಕ್ಕೆ 2ವರೆ ಕೆಜಿ ಅಕ್ಕಿ ಬರಲ್ಲ: ಬೊಮ್ಮಾಯಿ ಟೀಕೆ

Basavaraj bommai: ಕಾಂಗ್ರೆಸ್‌ ಕೊಡುವ ಹಣಕ್ಕೆ 2ವರೆ ಕೆಜಿ ಅಕ್ಕಿ ಬರಲ್ಲ: ಬೊಮ್ಮಾಯಿ ಟೀಕೆ

0 comments
Basavaraj bommai

Basavaraj bommai:ಕಾಂಗ್ರೆಸ್‌ ಸರ್ಕಾರ ಕೊಡುವ ಹಣದಲ್ಲಿ ಕೊಡುವ ಹಣಕ್ಕೆ ಮಾರ್ಕೆಟ್‌ನಲ್ಲಿ ಎರಡೂವರೆ ಕೆಜಿ ಅಕ್ಕಿ ಮಾತ್ರ ಬರುತ್ತದೆ ಎಂದು ಮಾಜಿ ಸಿಎಂ ಬೊಮ್ಮಾಯಿ(Basavaraj bommai) ಟೀಕಿಸಿದ್ದಾರೆ.

ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ 5 ಕೆ.ಜಿ ಅಕ್ಕಿ ಬದಲು ಹಣ ನೀಡಲು ಸಂಪುಟ ಸಭೆ ನಿರ್ಧಾರ ಕೈಗೊಳ್ಳಲಾಗಿದೆ.

ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾಜಿ ಸಿಎಂ ಬೊಮ್ಮಾಯಿ ಮಾತನಾಡಿ, ಚುನಾವಣಾ ಪ್ರಚಾರದ ಭರದಲ್ಲಿ ಕಾಂಗ್ರೆಸ್‌ 10 ಕೆ.ಜಿ ಅಕ್ಕಿ ಕೊಡುವುದಾಗಿ ಹೇಳಿತ್ತು. ಆದರೆ ಇದೀಗ ಅಕ್ಕಿ ಕೊಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಐದು ಕೆಜಿ ಕೊಡುವುದಾಗಿ ಹೇಳುತ್ತಿದ್ದಾರೆ. ನಾವು ಜನರಿಗೆ ಕೊಟ್ಟ ಭರವಸೆಯನ್ನು ತಪ್ಪಲ್ಲ ಎಂದು ಈ ಹಿಂದೆ ಹೇಳಿದ್ರೂ ಆದ್ರೆ, ಇದೀಗ ಅಕ್ಕಿ ಕೊಡುವುದಕ್ಕೆ ಅವರ ಕೈನಲ್ಲಿ ಆಗುತ್ತಿಲ್ಲ. ಅದರಲ್ಲೂ ಇದೀಗ ಹಣ ಕೊಡುತ್ತೇವೆ ಎಂದಿದ್ದಾರೆ ಆದ್ರೆ ಅವರು ಕೊಡುವ ಹಣಕ್ಕೆ ಮಾರ್ಕೆಟ್‌ನಲ್ಲಿ ಎರಡೂವರೆ ಕೆಜಿ ಅಕ್ಕಿ ಮಾತ್ರ ಬರುತ್ತದೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್‌ ಐದು ಗ್ಯಾರಂಟಿಗಳ ಪೈಕಿ ಅನ್ನಭಾಗ್ಯ ಯೋಜನೆಯಡಿ, ಉಚಿತ ಅಕ್ಕಿ ನೀಡಲು ಕರ್ನಾಟಕ ಸರ್ಕಾರ ಕೇಂದ್ರ ಆಹಾರ ನಿಗಮದ ಮೊರೆ ಹೋಗಿತ್ತು. ಹೆಚ್ಚುವರಿ ಅಕ್ಕಿ ಪೂರೈಕೆಗೆ ಒಪ್ಪಿಗೆ ಸಿಗದ ಕಾರಣಕ್ಕಾಗಿ ಇದೀಗ ಕಾಂಗ್ರೆಸ್‌ ಹೊಸ ಪ್ಲಾನ್‌ಗೆ ಮುಂದಾಗಿದ್ದಂತೂ ನಿಜ. ಮುಂದಿನ ದಿನಗಳಲ್ಲಿ ಈ ಸರ್ಕಾರ ಅಕ್ಕಿ ನೀಡುತ್ತಾ ಹಣ ನೀಡುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ:  Nalin Kumar kateel- MP Renukacharya: ರಾಜ್ಯದಲ್ಲಿ ಬಿಜೆಪಿ ಸೋಲಲು ರಾಜ್ಯಾಧ್ಯಕ್ಷರೇ ಕಾರಣ, ಆ ಸ್ಥಾನದಲ್ಲಿರೋ ಅರ್ಹತೆ ಅವರಿಗಿಲ್ಲ !! ಕಟೀಲ್ ಎಚ್ಚರಿಕೆ ಬೆನ್ನಲ್ಲೇ ರೊಚ್ಚಿಗೆದ್ದ ಹೊನ್ನಳ್ಳಿ ಹುಲಿ !!

You may also like

Leave a Comment