Home » Belgaum: ಬೆಳಗಾವಿ: ನಾಳೆ ವಿದ್ಯುತ್ ದರ ಏರಿಕೆ ಖಂಡಿಸಿ, ಕೈಗಾರಿಕೋದ್ಯಮಿಗಳಿಂದ ಮೌನ ಪ್ರತಿಭಟನೆ

Belgaum: ಬೆಳಗಾವಿ: ನಾಳೆ ವಿದ್ಯುತ್ ದರ ಏರಿಕೆ ಖಂಡಿಸಿ, ಕೈಗಾರಿಕೋದ್ಯಮಿಗಳಿಂದ ಮೌನ ಪ್ರತಿಭಟನೆ

0 comments
Belgaum

Belgaum: ಬೆಳಗಾವಿ: ಕರ್ನಾಟಕದಲ್ಲಿ ಉಚಿತ ವಿದ್ಯುತ್‌ ನೆಪದಲ್ಲಿ ವಿದ್ಯುತ್‌ ದರ ಹೆಚ್ಚಳ ವಿರೋಧಿಸಿ,ಬೆಳಗಾವಿ ನಾಳೆ ಚೆನ್ನಮ್ಮ ವೃತ್ತದಲ್ಲಿ ಕೈಗಾರಿಕೋದ್ಯಮಿಗಳಿಂದ ಪ್ರತಿಭಟನೆ ಮಾಡಲಾಗುತ್ತಿದೆ (Belgaum) ಎಂದು ವರದಿಯಾಗಿದೆ.

ಕರ್ನಾಟಕದಲ್ಲಿ ಭಾರೀ ಬಹುಮತದೊಂದಿಗೆ ಗೆದ್ದು ಬೀಗಿದ ಕಾಂಗ್ರೆಸ್‌ ಸರ್ಕಾರ ಐದು ಘೋಷಣೆಗಳಲ್ಲಿ ಒಂದಾದ ಉಚಿತ ವಿದ್ಯುತ್‌ ಯೋಜನೆಯನ್ನು ಮಾನದಂಡಗಳ ಆಧಾರದ ಮೆರೆಗೆ ಜಾರಿಗೆ ತರಲಾಗಿದೆ. ಇದೀಗ ಆಡಳಿತ ಕೈ ಹಿಡಿಯುತ್ತಿದ್ದಂತೆ ಜನ ಸಾಮಾನ್ಯರಿಗೆ ವಿದ್ಯುತ್‌ ದರ ದಿಢೀರ್‌ ಏರಿಕೆಯಾಗಿದ್ದು ಶಾಕ್‌ ನೀಡಿದಂತಾಗಿದೆ. ಈ ಬಗ್ಗೆ

ಇಂದು ಉದ್ಯಮಿಗಳ ಜಂಟಿ ಸುದ್ದಿಗೋಷ್ಟಿ ನಡೆಸಿ,ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಹೇಮಂತ್ ಪೋರವಾಲ್ ಮಾತನಾಡಿ, ಈ ವರ್ಷ ವಿದ್ಯುತ್‌ ದರ ಭಾರೀ ಹೆಚ್ಚಳ ಮಾಡಿದ್ದು ಖಂಡನೀಯ. ಕೊರೊನಾದಿಂದ ಕಂಗೆಟ್ಟಿದ್ದ ಕೈಗಾರಿಕೋದ್ಯಮಿಗಳು ಭಾರೀ ಎಫೆಕ್ಟ್‌ ತಟ್ಟಿದಂತಾಗಿದೆ. ಅಲ್ಲದೇ ದಿನದಿಂದ ದಿನಕ್ಕ ಶರವೇಗದಲ್ಲಿ ಶೇಕಡ 32 ರಿಂದ 65ರಷ್ಟು ವಿದ್ಯುತ್ ಬೆಲೆ ಏರಿಕೆ ಮಾಡಲಾಗಿದೆ ಹೀಗೆ ಮಾಡಿದ್ರೆ ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಅಲ್ಲದೇ ಮಹಾರಾಷ್ಟ್ರಕ್ಕೆ ಹೋಗುವಂತ ದುಸ್ಥಿತಿ ಎದುರಾಗಲಿದೆ ಎಂದಿದ್ದಾರೆ.

 

ಇದನ್ನು ಓದಿ: H D kumaraswamy: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಬಗ್ಗೆ ಕೊನೆಗೂ ಮೌನ ಮುರಿದ HDK !! 

You may also like

Leave a Comment