Home » Chaitra Kundapura Arrested: ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನ ಪ್ರಕರಣ; ಕಾಂಗ್ರೆಸ್‌ ಮಾಧ್ಯಮ ವಕ್ತಾರೆಗೆ ಸಿಸಿಬಿ ನೋಟಿಸ್‌!!

Chaitra Kundapura Arrested: ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನ ಪ್ರಕರಣ; ಕಾಂಗ್ರೆಸ್‌ ಮಾಧ್ಯಮ ವಕ್ತಾರೆಗೆ ಸಿಸಿಬಿ ನೋಟಿಸ್‌!!

by Mallika
4 comments

Chaitra Kundapura: ಇಂದು ಚೈತ್ರಾ ಕುಂದಾಪುರ (Chaitra Kundapura) ಸೇರಿದಂತೆ ಇಬ್ಬರನ್ನು ಬೆಂಗಳೂರಿನ ಸಿಸಿಬಿ (Bengaluru CCB) ಪೊಲೀಸರು ಬಂಧಿಸಿದ್ದಾರೆ. ಚೈತ್ರಾ ಕುಂದಾಪುರ ಬಂಧನವಾಗುವ ಮೊದಲು ಕಾಂಗ್ರೆಸ್‌ ಮುಖಂಡೆ ಮನೆಯಲ್ಲಿ ಅವಿತುಕೊಂಡಿದ್ದಳು ಎನ್ನುವ ಮಾಹಿತಿಯೊಂದು ವರದಿಯಾಗಿದೆ. ಇದೀಗ ಆಶ್ರಯ ನೀಡಿದ ತಪ್ಪಿಗೆ ಕಾಂಗ್ರೆಸ್‌ ಮಾಧ್ಯಮ ವಕ್ತಾರೆ ಅಂಜುಂಗೆ ಸಿಸಿಬಿ ನೋಟಿಸ್‌ ನೀಡಿರುವ ಮಾಹಿತಿ ಕುರಿತು ಟಿವಿ 9 ಕನ್ನಡ ಮಾಧ್ಯಮ ವರದಿ ಮಾಡಿದೆ.

ನಿನ್ನೆ (ಸೆ.12) ರಾತ್ರಿ ಉಡುಪಿಯ ಶ್ರೀಕೃಷ್ಣಮಠದ ಪಾರ್ಕಿಂಗ್‌ ಸ್ಥಳದಲ್ಲಿ ಚೈತ್ರಾ ಅವರನ್ನು ಪೊಲೀಸರು ಬಂಧಿಸಿದ್ದರು. ಬೈಂದೂರಿನ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂ.ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನ ಮಾಡಲಾಗಿದೆ.

ಬಂಧಿತ ಆರೋಪಿಗಳನ್ನು ಸಿಸಿಬಿ ಪೊಲೀಸರು ಉಡುಪಿಯಿಂದ ಬೆಂಗಳೂರಿಗೆ ಕರೆದುಕೊಂಡು ಬರತ್ತಿದ್ದಾರೆ. ಇಂದು ಸೆ.13ರ ವೇಳೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ಇನ್ನಷ್ಟು ತನಿಖೆ ಮಾಡಲು ತಮ್ಮ ವಶಕ್ಕೆ ಕೇಳುವ ಸಾಧ್ಯತೆ ಹೆಚ್ಚಿದೆ.

ಚೈತ್ರಾ ಕುಂದಾಪುರ, ಕಾಂಗ್ರೆಸ್‌ ಮಾಧ್ಯಮ ವಕ್ತಾರೆ ಅಂಜುಂ​ ಎನ್ನುವರ ನಿವಾಸದಲ್ಲಿ ಅವಿತುಕೊಂಡಿದ್ದರು ಎಂದು ವರದಿಯಾಗಿದ್ದು, ಇದರಿಂದ ಚೈತ್ರಾ ಕುಂದಾಪುರಗೆ ಆಶ್ರಯ ನೀಡಿದ ಕಾಂಗ್ರೆಸ್ ಮಾಧ್ಯಮ ವಕ್ತಾರೆ ಅಂಜುಂಗೆ ಸಂಕಷ್ಟ ಎದುರಾಗಿದೆ. ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಹೈಪ್ರೊಫೈಲ್‌ ಹನಿಟ್ರ್ಯಾಪ್‌ ಪ್ರಕರಣ; ಮಾಸ್ಟರ್‌ ಮೈಂಡ್‌ ಯುವತಿ ಅರೆಸ್ಟ್‌!

You may also like

Leave a Comment