Home » Bengaluru: ‘ಕರೆಂಟ್ ಕಳ್ಳ ಕುಮಾರಸ್ವಾಮಿ’ ಎಂದು ಪೋಸ್ಟ್ ಅಂಟಿಸಿದವ ಕೊನೆಗೂ ಸಿಕ್ಬಿದ್ದ – ಅಬ್ಬಬ್ಬಾ ಇವರಾ ಆ ಪೋಸ್ಟ್ ಅಂಟಿಸಿದ್ದು !!

Bengaluru: ‘ಕರೆಂಟ್ ಕಳ್ಳ ಕುಮಾರಸ್ವಾಮಿ’ ಎಂದು ಪೋಸ್ಟ್ ಅಂಟಿಸಿದವ ಕೊನೆಗೂ ಸಿಕ್ಬಿದ್ದ – ಅಬ್ಬಬ್ಬಾ ಇವರಾ ಆ ಪೋಸ್ಟ್ ಅಂಟಿಸಿದ್ದು !!

1 comment
Bengaluru

Bengaluru: ಅಕ್ರಮವಾಗಿ ವಿದ್ಯುತ್ತನ್ನು ಬಳಸಿಕೊಂಡಿರುವ ಆರೋಪದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದರು. ಆನಂತರ ಅದಕ್ಕೆ ದಂಡವನ್ನು ಕೂಡ ಪಾವತಿ ಮಾಡಿದರು. ಆದರೆ ಈ ನಡುವೆ ಯಾರೋ ಒಬ್ಬ ಅನಾಮಿಕ ವ್ಯಕ್ತಿ ರಾತ್ರೋರಾತ್ರಿ ಬಂದು ಜೆಡಿಎಸ್ ಆಫೀಸಿಗೆ ‘ಕರೆಂಟ್ ಕಳ್ಳ ಕುಮಾರಸ್ವಾಮಿ’ ಎಂಬ ಪೋಸ್ಟರ್ ಅಂಟಿಸಿದ್ದ. ಇವನ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದರು ಆದರೆ ಕೊನೆಗೂ ಆ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ.

ಹೌದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ(H D kumarswamy) ಅವರ ವಿರುದ್ಧ ಕರೆಂಟ್‌ ಕಳ್ಳ ಕುಮಾರ್‌ಸೋಮಿ ಎಂದು ಪೋಸ್ಟರ್‌ ಅಂಟಿಸಿ ಕಣ್ಣುತಪ್ಪಿಸಿದ್ದ ಕಾಂಗ್ರೆಸ್‌ ಮುಖಂಡ ಕೊನೆಗೂ ಪೊಲೀಸರ ವಶವಾಗಿದ್ದಾನೆ. ಪೊಲೀಸರಿಗೆ ದೂರು ನೀಡಿದರೂ ಆರೋಪಿ ಬಂಧಿಸದೇ ನಿರ್ಲಕ್ಷ್ಯ ಮಾಡಿದ್ದಾರೆಂದು ಇದೀಗ ಜೆಡಿಎಸ್‌ ಕಾರ್ಯಕರ್ತರೇ ಅವನನ್ನು ಕಂಡುಹಿಡಿದ್ದು, ಸಿಸಿಟಿವಿ ಫೂಟೇಜ್‌ ಸಮೇತ ಆರೋಪಿ ಯಾರೆಂಬುದನ್ನು ಪೋಲೀಸರಿಗೆ ತೋರಿಸಿದ್ದಾರೆ. ಹೀಗಾಗಿ ತಕ್ಷಣ ಕ್ರಮ ಕೈಗೊಳ್ಳುವಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಅಂದಹಾಗೆ ಬೆಂಗಳೂರಿನ(Bengaluru) ಜೆಪಿ ನಗರದ ಕುಮಾರಸ್ವಾಮಿ ಅವರ ಮನೆಯ ಬಳಿ, ಜೆಡಿಎಸ್ ಕಚೇರಿ, ಸದಾಶಿವನಗರ, ಶೇಷಾದ್ರಿಪುರ ಸೇರಿದಂತೆ ವಿವಿಧೆಡೆ ಕಾರಲ್ಲಿ ಹೋಗಿ ಮನೋಹರ್ ಎಂಬಾತನೆ ಪೋಸ್ಟರ್ ಅಂಟಿಸಿದ್ದಾನೆ. ಕಾಂಗ್ರೆಸ್ ನಿಂದ ಸಮಾಜದ ಶಾಂತಿಯನ್ನು ಹಾಳು ಮಾಡುವ ಕೆಲಸ ಮಾಡಲಾಗ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

You may also like

Leave a Comment