Home » ಹುಟ್ಟುಹಬ್ಬದಂದೇ ನಿಧನ ಹೊಂದಿದ ಕರ್ನಾಟಕದ ಮಾಜಿ ಸಚಿವ | ಮೋರೆ ಸಾವಿಗೆ ಕಂಬನಿ ಮಿಡಿದ ರಾಜಕೀಯ ನಾಯಕರು

ಹುಟ್ಟುಹಬ್ಬದಂದೇ ನಿಧನ ಹೊಂದಿದ ಕರ್ನಾಟಕದ ಮಾಜಿ ಸಚಿವ | ಮೋರೆ ಸಾವಿಗೆ ಕಂಬನಿ ಮಿಡಿದ ರಾಜಕೀಯ ನಾಯಕರು

by ಹೊಸಕನ್ನಡ
0 comments

ಧಾರವಾಡ ಜಿಲ್ಲೆಯ ಕಾಂಗ್ರೆಸ್ ನ ಹಿರಿಯ ಮುಖಂಡ, ಮಾಜಿ ಸಚಿವ ಎಸ್.ಆರ್. ಮೋರೆ (82) ಇಂದು ಬೆಳಗ್ಗೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮರಾಠಾ ಸಮಾಜದ ಪ್ರಭಾವಿ ನಾಯಕರಾಗಿದ್ದ ಮೋರೆ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮೋರೆ ಅವರು 4 ಬಾರಿ ಧಾರವಾಡ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ದಿವಂಗತ ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪ ಮತ್ತು ಧರ್ಮಸಿಂಗ್ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಬಂಗಾರಪ್ಪ ಅವಧಿಯಲ್ಲಿ ಸಹಕಾರ ಸಚಿವ ಹಾಗೂ ಧರ್ಮಸಿಂಗ್ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದರು.

ಇಂದು ಮೋರೆ ಅವರ 82ನೇ ಜನ್ಮದಿನ ಆಚರಣೆಯಾಗಬೇಕಿತ್ತು. ಆದರೆ, ಜನ್ಮದಿನದಂದೇ ಮಾಜಿ ಸಚಿವರು ಕೊನೆಯುಸಿರೆಳೆದಿದ್ದಾರೆ. ಅವರು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಸಚಿವರ ಸಾವಿಗೆ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ.

You may also like

Leave a Comment