Home » ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ!! ನಳಿನ್ ಬೆನ್ನಲ್ಲೇ ಬೊಮ್ಮಾಯಿ ಕುರ್ಚಿಗೂ ಬೀಳಲಿದೆ ಹೊಡೆತ

ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ!! ನಳಿನ್ ಬೆನ್ನಲ್ಲೇ ಬೊಮ್ಮಾಯಿ ಕುರ್ಚಿಗೂ ಬೀಳಲಿದೆ ಹೊಡೆತ

0 comments

ಮಂಡಿನೋವಿನ ಕಾರಣದಿಂದಾಗಿ ಶಸ್ತ್ರ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲಿರುವ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ರಾಜೀನಾಮೆ ಕೊಟ್ಟು ಹೋಗುತ್ತಾರೆ ಎಂಬ ಸುದ್ದಿ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯಂತೆ ಹಬ್ಬಿದೆ. ಈ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿದ್ದು,ಇದೇ ತಿಂಗಳ 28-29 ರಂದು ನಡೆಯುವ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರದ ಬಗ್ಗೆ ಮಾತುಕತೆ ನಡೆಯಲಿದೆ ಎಂದು ತಿಳಿದುಬಂದಿದೆ.

ಮಾಮೂಲಿಯಾಗಿ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿಯ ಹಿರಿಯ ವರಿಷ್ಠರು ಪಾಲ್ಗೊಳ್ಳುವುದು ವಿರಳ. ಆದರೆ ಈ ಬಾರಿಯ ಸಭೆಯಲ್ಲಿ ರಾಷ್ಟೀಯ ಅಧ್ಯಕ್ಷ ಜೆಪಿ ನಡ್ದಾ, ಸಹಿತ ಹಲವರು ಭಾಗವಹಿಸಲಿದ್ದು, ಸಚಿವ-ಶಾಸಕರ ಸಹಿತ ಆರ್ ಎಸ್ ಎಸ್ ನಾಯಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ ಎಂಬ ಮಾಹಿತಿ ಇದೆ.

ಅದಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷರ ಕುರ್ಚಿಗೂ ಪೆಟ್ಟು ಬೀಳಲಿದ್ದು, ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಹೊಸಬರನ್ನು ನೇಮಿಸಲಾಗುತ್ತದೆ ಎಂಬ ವದಂತಿ ಕೂಡಾ ಹಬ್ಬಿದೆ. ಸಂಘಟನೆ ಹಾಗೂ ಕ್ಷೇತ್ರದಲ್ಲಿನ ಕೆಲಸ ಕಾರ್ಯಗಳಲ್ಲಿ ನಳಿನ್ ಪಾತ್ರ ಹೇಗಿದೆ ಎಂಬ ಬಗ್ಗೆ ಈಗಾಗಲೇ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದೂ, ಎಲ್ಲವೂ ನಾಳಿನ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರವಾಗಲಿದೆ.

You may also like

Leave a Comment