Home » BJP Candidate Second List: ಸದಾನಂದ ಗೌಡರಿಂದ ಬೆಂಗಳೂರು ಉತ್ತರದಿಂದ ಟಿಕೆಟ್‌ ಬೇಡಿಕೆ; ವರಿಷ್ಠರು ಹೇಳಿದ್ದೇನು?

BJP Candidate Second List: ಸದಾನಂದ ಗೌಡರಿಂದ ಬೆಂಗಳೂರು ಉತ್ತರದಿಂದ ಟಿಕೆಟ್‌ ಬೇಡಿಕೆ; ವರಿಷ್ಠರು ಹೇಳಿದ್ದೇನು?

1 comment
BJP Candidate Second List

BJP Candidate Second List: ಸೋಮವಾರ ರಾತ್ರಿ ದೆಹಲಿಯಲ್ಲಿ ಲೋಕಸಭೆ ಚುನಾವಣೆಗೆ (Lok Sabha Elections 2024) ಕುರಿತು ಅಭ್ಯರ್ಥಿ ಆಯ್ಕೆ ಸಂಬಂಧ ಹಾಗೂ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ ಕುರಿತು ಸಭೆ ನಡೆದಿದೆ. ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್‌ಗೆ ಮೂರನೇ ಬಾರಿಗೆ ಡಿವಿ ಸದಾನಂದ ಗೌಡ (DV Sadananda Gowda) ಆಕಾಂಕ್ಷಿಯಾಗಿರುವ ಬಿಜೆಪಿ ವರಿಷ್ಠರು ಈ ಹಿಂದೆಯೇ ರಾಜ್ಯ ನಾಯಕರಿಗೆ ಪ್ರಶ್ನೆ ಕೇಳಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Rashmika Mandanna Deep Fake Video: ರಶ್ಮಿಕಾ ಮಂದಣ್ಣ ಇನ್ನೊಂದು ಎದೆತುಂಬಿದ ಡೀಪ್‌ಫೇಕ್‌ ವಿಡಿಯೋ ವೈರಲ್‌

ಸದಾನಂದ ಗೌಡ ಹೆಸರನ್ನು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ವರಿಷ್ಠರ ಮುಂದೆ ರಾಜ್ಯ ನಾಯಕರು ಪ್ರಸ್ತಾಪ ಮಾಡಿದ್ದಾರೆ. ಇದೇ ವೇಳೆ ವರಿಷ್ಠರು ರಾಜ್ಯ ನಾಯಕರಿಗೆ, ‘ಸದಾನಂದ ಗೌಡರು ಸ್ಪರ್ಧೆ ಬಯಸುವುದಾದರೆ ಅಂದು ಚುನಾವಣಾ ನಿವೃತ್ತಿಯ ಬಗ್ಗೆ ಮಾತನಾಡಿದ್ದೇಕೆ’ ಎಂದು ಪ್ರಶ್ನೆ ಮಾಡಿರುವ ಕುರಿತು ವರದಿಯಾಗಿದೆ. ನಂದೀಶ್ ರೆಡ್ಡಿ ಕೂಡಾ ಈ ಸಂದರ್ಭದಲ್ಲಿ ಟಿಕೆಟ್‌ ಆಕಾಂಕ್ಷಿ ಎಂದು ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂಬ ಮಾಹಿತಿ ಇದೆ. ಇದೆಲ್ಲದರ ಮಧ್ಯೆ ʼನೀವೇ ಅಭ್ಯರ್ಥಿಯಾದರೆ ಹೇಗೆ? ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್‌ ಅವರನ್ನು ಹೈಕಮಾಂಡ್‌ ಪ್ರಶ್ನೆ ಮಾಡಿದೆ ಎಂದು ಕೂಡಾ ವರದಿಯಾಗಿದೆ.

ಇತ್ತೀಚೆಗೆ ಡಿವಿ ಸದಾನಂದ ಗೌಡ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಹೇಳಿದ್ದರು. ಹೊಸ ಮುಖಗಳಿಗೆ ಅವಕಾಶ ನೀಡಲಿ ಎಂದು ಅವರ ಉದ್ದೇಶವಾಗಿತ್ತು. ಆದರೆ ದಿಢೀರ್‌ ಆಗಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಹೇಳಿದ್ದರು. ಲೋಕಸಭಾ ಚುನಾವಣೆಗೆ ಸ್ವಲ್ಪ ದಿನ ಇರುವಾಗಲೇ ಈ ರೀತಿ ಮಾತಾಡಿದ್ದ ಅವರು ನಾನು ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಎಂದು ಹೇಳಿದ್ದರು.

You may also like

Leave a Comment