Home » B.K Hariprasad: ಬಿಜೆಪಿಯವರು ಸ್ಮಶಾನ, ಮಸೀದಿ, ಮಂದಿರದಲ್ಲೂ ರಾಜಕೀಯ ಮಾಡ್ತಾರೆ ; ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಬಿ.ಕೆ.ಹರಿಪ್ರಸಾದ್​!!

B.K Hariprasad: ಬಿಜೆಪಿಯವರು ಸ್ಮಶಾನ, ಮಸೀದಿ, ಮಂದಿರದಲ್ಲೂ ರಾಜಕೀಯ ಮಾಡ್ತಾರೆ ; ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಬಿ.ಕೆ.ಹರಿಪ್ರಸಾದ್​!!

0 comments

BK Hariprasad: ಪಕ್ಷದ ಅಭ್ಯರ್ಥಿಗಳು ಚುನಾವಣೆಗೆ ಭರದ ಸಿದ್ಧತೆಯಲ್ಲಿ ತೊಡಗುತ್ತಾ, ಪ್ರತಿಪಕ್ಷದ ವಿರುದ್ಧ ಮಾತಿನ ಮೂಲಕ ಚಾಟಿ ಏಟು ನೀಡುತ್ತಿದ್ದಾರೆ. ಇದೀಗ ಕಾಂಗ್ರೆಸ್ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ (BK Hariprasad) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಕನ್ನಡ (Uttar kannada) ಜಿಲ್ಲೆಯ ಕಾರವಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, “ಬಿಜೆಪಿಯವರು (bjp) ಪಾಳುಬಿದ್ದ ಸ್ಮಶಾನ, ಮುರುಕಲು ಬಿದ್ದ, ಮಸೀದಿ, ಮಂದಿರದಲ್ಲೂ ರಾಜಕೀಯ ಮಾಡ್ತಾರೆ. ಆದರೆ, ಈ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಗೆ ತಕ್ಕ ಉತ್ತರ ನೀಡುತ್ತಾರೆ” ಎಂದು ಹೇಳಿದರು.

ಬಿಜೆಪಿಯಲ್ಲಿ ಕೋಟಿ ಕೋಟಿ ಹಣ ಸುರಿದರೆ ಸಾಕು ಶಾಸಕ ಏನು, ಸಿಎಂ (CM) ಆಗ್ಬೋದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಹೇಳಿದ್ದಾರೆ. ಕಾಂಗ್ರೇಸ್ ನಲ್ಲಿ ಸಿಬಿಐ, ಇಡಿಯನ್ನು ತಮಗೆ ಬೇಕಾದ ಹಾಗೆ ಬಲೆಯಲ್ಲಿರಿಸಿದ್ದಾರೆ. ಹಾಗಾಗಿಯೇ ನಾವು ಯಾವುದೇ ದೂರು ಕೊಡಲು ಹೋಗಿಲ್ಲ. ಸಿಬಿಐ, ಇಡಿ ಅವರ ಮುಷ್ಟಿಯಲ್ಲಿರುವಾಗ ದೂರು ಕೊಟ್ಟರೂ ವ್ಯರ್ಥ. ಆದರೆ, ಇಂದು (ಏ.24) ಗಂಗಾಧರ ಗೌಡರ (Gandadhara gowda) ಮನೆಗೆ ಐಟಿ ರೈಡ್ ಆಗಿದೆ ಎಂದು ಹೇಳಿದರು.

“ಕಾಂಗ್ರೆಸ್ (congress) ಸ್ಟಾರ್ ಪ್ರಚಾರಕರ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ನಾವು ಬ್ರಿಟಿಷರ ಗುಲಾಮರಾಗಿರಲಿಲ್ಲ, ಬೂಟ್ ನೆಕ್ಕಿದವರಲ್ಲ. ಬ್ರಿಟೀಷರಿಗೆ ಎದೆ ತಟ್ಟಿ ನಿಂತವರು ನಾವು, ಅದನ್ನು ಎದುರಿಸುತ್ತೇವೆ. ನಾವು ಅಧಿಕಾರಕ್ಕೆ ಬಂದಮೇಲೆ ಭ್ರಷ್ಟಾಚಾರದಲ್ಲಿ ಭಾಗಿಯಾದ ಬಿಜೆಪಿಗರನ್ನು ಜೈಲಿಗೆ ಕಳುಹಿಸುತ್ತೇವೆ” ಎಂದು ಬಿಜೆಪಿ ವಿರುದ್ದ ಕಿಡಿಕಿರಿದ್ದಾರೆ.

ಇದನ್ನೂ ಓದಿ: Govt Employees: ಸರಕಾರಿ ನೌಕರರೇ ಶೇ.17 ರಷ್ಟು ಹೆಚ್ಚಳ ಜಾರಿಗೆ ಅನುದಾನ -ಆರ್ಥಿಕ ಇಲಾಖೆಯಿಂದ ಸೂಚನೆ

You may also like

Leave a Comment