Home » BJP: 5 ದಿನಗಳಲ್ಲಿ 50 ಲಕ್ಷ ಮನೆಗಳ ಬಾಗಿಲಿಗೇ ಬರಲಿದೆ ಬಿಜೆಪಿ ನಾಯಕರ ದಂಡು!! ಕಾರಣವೇನು?

BJP: 5 ದಿನಗಳಲ್ಲಿ 50 ಲಕ್ಷ ಮನೆಗಳ ಬಾಗಿಲಿಗೇ ಬರಲಿದೆ ಬಿಜೆಪಿ ನಾಯಕರ ದಂಡು!! ಕಾರಣವೇನು?

by ಹೊಸಕನ್ನಡ
0 comments
BJP

BJP :ರಾಜ್ಯದಲ್ಲಿ ಸೋತು ಸುಣ್ಣವಾಗಿರೋ ಬಿಜೆಪಿ(BJP)ಯು, ಹೇಗಾದರೂ ಮಾಡಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕೆಂದು ಪಣಟೊಟ್ಟಿದೆ. ಹೀಗಾಗಿ ಪ್ರತಿಯೊಬ್ಬ ಕಾರ್ಯಕರ್ತರ ಮನೆ ಬಾಗಿಲವರೆಗೂ ಸ್ವತಃ ಬಿಜೆಪಿ ನಾಯಕರೇ ಬರಲಿದ್ದು, ಐದು ದಿನಗಳಲ್ಲಿ ರಾಜ್ಯದ 50 ಲಕ್ಷ ಮನೆಗಳಿಗೆ ಭೇಟಿ(Visit) ಕೊಡುವ ಯೋಜನೆಯನ್ನು ರೂಪಿಸಿಕೊಂಡಿದ್ದಾರೆ.

 

ಹೌದು, ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ(Assembly election) ಹೀನಾಯವಾಗಿ ಸೋತಿರೋ ಬಿಜೆಪಿ ತನ್ನ ಸೋಲಿನ ಕಾರಣಗಳನ್ನು ಹುಡುಕುತ್ತ, ಆಗಾಗ ಆತ್ಮ ವಿಮರ್ಶೆಯ ಸಭೆಗಳನ್ನು ನಡೆಸುತ್ತಿದೆ. ಇದರೊಂದಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಹಾಲಿ ಇರುವ ಕ್ಷೇತ್ರಗಳನ್ನು ಗೆದ್ದು, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರು ಕಾರ್ಯಕರ್ತರು ಮತ್ತು ಮತದಾರರ ಮನೆ ಬಾಗಿಲಿಗೇ ತೆರಳಿ ಭೇಟಿ ಮಾಡಲು ನಿರ್ಧರಿಸಿದ್ದಾರೆ.

 

ಅಂದಹಾಗೆ ಈಗಿನ ಸೋಲು ಹಾಗೂ ಮುಂದಿನ ಗೆಲುವು ಎಂಬ ನಂಬಿಕೆಯೊಂದಿಗೆ ಇಂಥದ್ದೊಂದು ಕಾರ್ಯಕ್ರಮವನ್ನು ಪಕ್ಷ ಹಮ್ಮಿಕೊಂಡಿದ್ದು, ಜೂನ್(June) 25ರಿಂದ ಐದು ದಿನಗಳ ಕಾಲ ಪಕ್ಷದ ನಾಯಕರು ಪ್ರತಿಯೊಬ್ಬ ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಮನೆಮನೆಗೂ ಭೇಟಿ ನೀಡಲಿದ್ದಾರೆ. ಐದು ದಿನಗಳಲ್ಲಿ ರಾಜ್ಯಾದ್ಯಂತದ 50 ಲಕ್ಷ ಮನೆಗಳಿಗೆ ತೆರಳುವ ಗುರಿ ಇರಿಸಿಕೊಳ್ಳಲಾಗಿದೆ.

 

ಪಕ್ಷದ ಹಿರಿಯ ನಾಯಕರು ಆರೇಳು ತಂಡಗಳನ್ನು ರಚಿಸಿಕೊಂಡು ಐದು ದಿನಗಳಲ್ಲಿ ರಾಜ್ಯದ ಪ್ರತಿ ಮನೆಗೂ ತಲುಪುವ ಗುರಿ ಇರಿಸಿಕೊಂಡಿದ್ದಾರೆ.ಇಷ್ಟೇ ಅಲ್ಲದೆ ಪ್ರತಿ ಜಿಲ್ಲೆಯಲ್ಲೂ ಒಂದರಿಂದ ಎರಡು ಸಾವಿರದಷ್ಟು ಅತಿಮುಖ್ಯ ಜನರನ್ನು ಗುರುತಿಸಿ, ಅವರೊಂದಿಗೆ ಚರ್ಚೆ ಮಾಡಲಾಗುವುದು. ಈ ಸಲ ಏನು ತಪ್ಪಾಗಿತ್ತು ಎನ್ನುವುದರ ಕುರಿತು ಆತ್ಮಾವಲೋಕನ ಮಾಡುವ ಜತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ(Parliament election) ಏನು ಮಾಡಬೇಕು ಎಂಬ ಕುರಿತೂ ಸಮಾಲೋಚನೆ ಮಾಡಲಾಗುತ್ತದೆ.

ಇದನ್ನೂ ಓದಿ :ಬೆಳಗಾವಿ: ನಾಳೆ ವಿದ್ಯುತ್ ದರ ಏರಿಕೆ ಖಂಡಿಸಿ,ಕೈಗಾರಿಕೋದ್ಯಮಿಗಳಿಂದ ಮೌನ ಪ್ರತಿಭಟನೆ

You may also like

Leave a Comment