Home » BJP Leader Shot: ರಾಷ್ಟ್ರೀಯ ಹೆದ್ದಾರಿಯಲ್ಲೇ ಬಿಜೆಪಿ ಮುಖಂಡನ ಕಾರಿನ ಮೇಲೆ ಗುಂಡಿಕ್ಕಿ ಹತ್ಯೆ !

BJP Leader Shot: ರಾಷ್ಟ್ರೀಯ ಹೆದ್ದಾರಿಯಲ್ಲೇ ಬಿಜೆಪಿ ಮುಖಂಡನ ಕಾರಿನ ಮೇಲೆ ಗುಂಡಿಕ್ಕಿ ಹತ್ಯೆ !

0 comments
BJP Leader Shot

BJP Leader Shot: ಹಾಡು ಹಗಲೇ ಬಿಜೆಪಿ ಪ್ರಭಾವೀ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪಶ್ಚಿಮ ಬಂಗಾಳದ (West Bengal) ಪುರ್ಬಾ ವರ್ಧಮಾನ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಬಿಜೆಪಿ ಮುಖಂಡನನ್ನು  ಗುಂಡಿಕ್ಕಿ (BJP Leader Shot) ಹತ್ಯೆ ಮಾಡಲಾಗಿದೆ.

ರಾಜು ಝಾ (Raju Jha) ಅವರು ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದರು. ಅಕ್ರಮ ಕಲ್ಲಿದ್ದಲು ವ್ಯವಹಾರ ನಡೆಸುತ್ತಿರುವ ಆರೋಪ ಹೊತ್ತಿರುವ ರಾಜು ಝಾ (Raju Jha) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ರಾಜು ಅವರು ಕಳೆದ 2021ರ ರಾಜ್ಯ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ್ದರು. ತಮ್ಮ ಸ್ನೇಹಿತನೊಂದಿಗೆ ಕೋಲ್ಕತ್ತಾಗೆ ಹೋಗುತ್ತಿದ್ದ ಸಂದರ್ಭ ಅವರನ್ನು ಕಾರಿನಲ್ಲೇ ಗುಂಡಿಕ್ಕಿ ಕೊಲ್ಲಲಾಗಿದೆ.

ಇಂದು ಮುಂಜಾನೆ ರಾಜು ಝಾ ಮತ್ತು ಅವರ ಸ್ನೇಹಿತ ಕೋಲ್ಕತ್ತಾಗೆ ಹೋಗುತ್ತಿದ್ದರು. ದಾರಿ ಮಧ್ಯೆ ಅವರು ಕಾರನ್ನು ಶಕ್ತಿಗಢದಲ್ಲಿ ನಿಲ್ಲಿಸಿ ಚಹಾ ಸೇವನೆಗೆ ಇಳಿಯುವ ಸಂದರ್ಭ ಅವರ ಮೇಲೆ ದಾಳಿ ನಡೆದಿದೆ. ಅವರ ಕಾರನ್ನು ಹೆದ್ದಾರಿಯ ಪಕ್ಕ ನಿಲ್ಲಿಸಿದಾಗ ಮತ್ತೊಂದು ಕಾರು ಅದರ ಪಕ್ಕದಲ್ಲಿ ಬಂದು ನಿಂತಿತು. ಅದರಲ್ಲಿದ್ದ ದುಷ್ಕರ್ಮಿಗಳು ಬಿಜೆಪಿ ಮುಖಂಡನ ಮೇಲೆ ಗುಂಡು ಹಾರಿಸಿದ್ದಾರೆ.

ಗುಂಡಿನ ದಾಳಿಯಲ್ಲಿ ರಾಜು ಝಾ ಸಾವನ್ನಪ್ಪಿದರೆ, ಅವರ ಸ್ನೇಹಿತನಿಗೆ ಗುಂಡಿನ ಗಾಯಗಳಾಗಿವೆ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಪೊಲೀಸರು ಚಾಲಕನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ವಾಹನದಲ್ಲಿ ಗುಂಡುಗಳು ಹೊಕ್ಕಿರುವ ಗುರುತುಗಳು ಕಂಡುಬಂದಿವೆ.

ಬಿಜೆಪಿ ನಾಯಕ ರಾಜು ಝಾ ಅವರನ್ನು ಪುರ್ಬಾ ಬರ್ಧಮಾನ್‌ನ ಶಕ್ತಿಗಢದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಹಂತಕರು ಇದ್ದ ವಾಹನವನ್ನು ಪತ್ತೆಹಚ್ಚಲು ಸ್ಥಳೀಯ ಅಂಗಡಿಗಳಲ್ಲಿ ವಿಚಾರಿಸಲಾಗುತ್ತಿದೆ. ಟೋಲ್ ಪ್ಲಾಜಾ ಸೇರಿದಂತೆ ಹತ್ತಿರದ ಪ್ರದೇಶಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಘಟನೆ ಬಗ್ಗೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment