Home » Preetham Gowda: ದೇವೆಗೌಡರ ಬಗ್ಗೆ ನನಗಿರುವ ಗೌರವ ಅವರ ಮನೆಯವರಿಗಿಲ್ಲ – ಬಿಜೆಪಿ ಶಾಸಕ ಪ್ರೀತಮ್ ಗೌಡ ಹೇಳಿಕೆ!

Preetham Gowda: ದೇವೆಗೌಡರ ಬಗ್ಗೆ ನನಗಿರುವ ಗೌರವ ಅವರ ಮನೆಯವರಿಗಿಲ್ಲ – ಬಿಜೆಪಿ ಶಾಸಕ ಪ್ರೀತಮ್ ಗೌಡ ಹೇಳಿಕೆ!

2 comments
Preetham Gowda

Preetham Gowda: ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಎಲ್ಲ ಪಕ್ಷಗಳಲ್ಲೂ ಗೆಲುವಿಗಾಗಿ ರಣತಂತ್ರ ರೂಪಿಸಲಾಗುತ್ತಿದೆ. ಈ ನಡುವೆ ಭಾರೀ ಕುತೂಹಲ ಹುಟ್ಟು ಹಾಕಿದ್ದ ಹಾಸನದ ಬಿಜೆಪಿ(,BJP) ಸ್ಪರ್ಧಾಕಣಕ್ಕೆ ಪ್ರೀತಂ ಗೌಡ ಅವರ ಪತ್ನಿ ನಾಮಪತ್ರ ಸಲ್ಲಿಸಿದ್ದರು. ಆದರೆ, ನಾಮಪತ್ರ ಸಲ್ಲಿಕೆಯ ಕೊನೆಯ ಕ್ಷಣದಲ್ಲಿ ಕಮಲ ಪಾಳಯ ಎಲ್ಲರಿಗೂ ಶಾಕ್ ನೀಡಿ ಬಿಜೆಪಿ ಶಾಸಕ ಪ್ರೀತಂಗೌಡ ನಾಮಪತ್ರ ಸಲ್ಲಿಸಿದ್ದರು. ಇದೀಗ, ಜೆಡಿಎಸ್(JDS) ಪಕ್ಷದ ದೇವೆಗೌಡರ ಬಗ್ಗೆ ಪ್ರೀತಮ್ ಗೌಡ(Preetham Gowda) ಹೇಳಿಕೆ ನೀಡಿದ್ದಾರೆ.

ಇದರ ನಡುವೆ ಭವಾನಿ ರೇವಣ್ಣ ಸ್ವರೂಪ್ ನನ್ನ ಮಗ ಎಂಬ ಹೇಳಿಕೆ ನೀಡಿದ್ದರು. ಸದ್ಯ ಈ ವಿಚಾರಕ್ಕೆ ಹಾಸನದಲ್ಲಿ‌ ಶಾಸಕ ಪ್ರೀತಂಗೌಡ ಪ್ರತಿಕ್ರಿಯೆ ನೀಡಿದ್ದು, ಭವಾನಿ ಅವರ ಪ್ರೀತಿ ಸ್ವರೂಪ್ ಮೇಲಿದ್ದು, ಎಲ್ಲರಿಗೂ ಜಗಜ್ಜಾಹೀರಾಗಿದೆ. ಇಬ್ಬರೂ ಹೊಂದಾಣಿಕೆ ಮಾಡಿಕೊಳ್ಳಲು ತಂತ್ರ ರೂಪಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಲೇವಡಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಹೆಚ್.ಡಿ. ದೇವೇಗೌಡರ ಬಗ್ಗೆ ಅವರ ಮನೆಯವರಿಗಿಂತ ಹೆಚ್ಚಿನ ಗೌರವ ನನಗಿದೆ ಎನ್ನುವ ಮೂಲಕ ತಮ್ಮದೇ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ.

ದೇವೇಗೌಡರಂತಹ ಮುತ್ಸದ್ದಿ ನಾಯಕರು ಇಡೀ ದೇಶಕ್ಕೆ ಆಸ್ತಿಯಾಗಿದ್ದು, ಅವರನ್ನು ಹಾಸನದಲ್ಲಿ ನಿಲ್ಲಿಸಿ ಗೆಲ್ಲಿಸಬೇಕು ಎಂಬುವುದು ಕಾರ್ಯಕರ್ತರ ಹಂಬಲವಾಗಿತ್ತು. ಅದರೆ ದೇವೇಗೌಡರನ್ನು ಕೊನೆ ಚುನಾವಣೆಯಲ್ಲಿ ತುಮಕೂರಿಗೆ ಕಳಿಸಿದ್ದರು. ಅವರ ಸ್ವಾರ್ಥಕ್ಕೆ ದೇವೇಗೌಡರ ಮಗನನ್ನು ತುಮಕೂರಿಗೆ ಕಳುಹಿಸಿದ್ದರು. ಮಗನನ್ನು ತುಮಕೂರಿಗೆ ಕಳುಹಿಸುವ ಪ್ಲಾನ್ ಏಕೆ ಮಾಡಲಾಯಿತು. ದೇವೇಗೌಡರ ಮೇಲೆ ಹಾಸನದ ಜನ ಇಟ್ಟುಕೊಂಡಿರುವ ಗೌರವವನ್ನು ದೇವೆಗೌಡರ ಮನೆಯವರು ಇಟ್ಟುಕೊಂಡರೆ ಸಾಕು! ಎಂದು ಪ್ರೀತಂ ಗೌಡರವರು ಹೇಳಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿ: ಸೋಮಾವತಿ ನದಿಯಲ್ಲಿ ಮೀನುಗಳ ಮಾರಣಹೋಮ!

You may also like

Leave a Comment