Ramesh jigajinagi: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚಿಸಿರುವ ಆರೋಪ ಹೊತ್ತಿರುವ ಚೈತ್ರಾ ಕುಂದಾಪುರ ಮತ್ತು ಆಕೆಯ ಟೀಂ ಬಗ್ಗೆ ದಿನದಿಂದ ದಿನಕ್ಕೆ ಹೊಸ ಇನ್ಫಾರ್ಮೇಷನ್ ಸಿಗ್ತಾ ಇದೆ. ಇದೀಗ ಬಿಜೆಪಿಯ ಸಂಸದರೊಬ್ಬರ ಹೆಸರು ಇದರಲ್ಲಿ ತಳುಕುಹಾಕಿಕೊಂಡಿದೆ.
ಹೌದು, ನಿನ್ನೆ ತಾನೆ ಬಿಜೆಪಿ ಪ್ರಬಲ ನಾಯಕ, ಕಾರ್ಕಳ ಶಾಸಕ ಸುನಿಲ್ ಕುಮಾರ್(Sunil kumar) ಅವರ ಹೆಸರು ವೈರಲ್ ಆದ ಚೈತ್ರಾ ಕುಂದಾಪುರ ಅವರ ಆಡಿಯೋ ದಲ್ಲಿ ಕೇಳಿಬಂದಿತ್ತು. ಇದು ರಾಜ್ಯ ರಾಜಕೀಯದಲ್ಲಿ ಕೊಂಚ ಮಟ್ಟಿಗೆ ಸಂಚಲನ ಸೃಷ್ಟಿಸಿ ಬಿಜೆಪಿ ಪಾಳಯದಲ್ಲಿ ಗೊಂದಲ ಉಂಟುಮಾಡಿತ್ತು. ಆದರೀಗ ಈ ಬೆನ್ನಲ್ಲೇ ವಿಜಯಪುರ ಸಂಸದರಾದ ರಮೇಶ್ ಜಿಗಜಿಣಗಿ(Ramesh jigajinagi) ಅವರ ಹೆಸರು ಕೇಳಿಬಂದಿದೆ.

ಅಂದಹಾಗೆ ಚೈತ್ರಾ ಕುಂದಾಪುರ ಅವರು ಹಿಂದೊಮ್ಮೆ ಮಾತನಾಡಿದ್ದ ವಿಡಿಯೋವೊಂದರಲ್ಲಿ ರಮೇಶ್ ಜಿಗಜಿಣಗಿ ಹೆಸರು ಪ್ರಸ್ತಾಪಿಸಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಜಿಗಜಿಣಗಿ ಅವರು ಕೂಡ ಚೈತ್ರಾ ಕುಂದಾಪುರ ಅವರಿಂದ ಕೋಟಿಗಟ್ಟಲೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆ ಆಗುತ್ತಿದೆ.
ಏನಂದ್ರು ರಮೇಶ್ ಜಿಗಜಿಣಗಿ?
ಚೈತ್ರಾ ಕುಂದಾಪುರ ಯಾರು, ಆಕೆಯ ಊರು ಯಾವುದೆಂದೇ ಗೊತ್ತಿಲ್ಲ. ಟಿವಿಯಲ್ಲಿ ನೋಡಿದ ಬಳಿಕ ಆಕೆ ಬಗ್ಗೆ ಗೊತ್ತಾಗಿದೆ. ಹೀಗಾಗಿ ನಾನ್ಯಾಕೆ ಆಕೆ ಬಳಿ ಕೋಟಿ ರುಪಾಯಿ ಕೇಳಲಿ? ಆಕೆ ಬರೇ ಸುಳ್ಳು ಹೇಳುತ್ತಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಚೈತ್ರಾ ಕುಂದಾಪುರ ಬಳಿ ನಾನು ಹಣ ಕೇಳಿದ್ದೇನೆಂಬ ಸುದ್ದಿ ಹರಿದಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
