Home » ಬಿಜೆಪಿಯವರು ಪ್ರತಿ ಮಸೀದಿಯಲ್ಲಿ ದೇವಸ್ಥಾನ ನೋಡುತ್ತಾರೆ!

ಬಿಜೆಪಿಯವರು ಪ್ರತಿ ಮಸೀದಿಯಲ್ಲಿ ದೇವಸ್ಥಾನ ನೋಡುತ್ತಾರೆ!

0 comments

ಲೋಕಸಭಾ ಸದಸ್ಯ ಹಾಗೂ ಸಮಾಜವಾದಿ ಪಕ್ಷದ ನಾಯಕ ಶಫೀಕರ್ ರಹಮಾನ್ ಬಾರ್ಕ್ ಅವರು ರಾಜಕೀಯ ಅಖಾಡಕ್ಕೆ ಟಾಂಗ್ ನೀಡಿದ್ದಾರೆ. ಹೌದು ಮುಂದಿನ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಲಾಭ ಪಡೆಯಲು ಏಕರೂಪ ನಾಗರಿಕ ಸಂಹಿತೆಯಂತಹ ವಿಭಜಕ ವಿಷಯಗಳನ್ನು ಎತ್ತುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಾರ್ಕ್ ಪ್ರಕಾರ “ಬಿಜೆಪಿ ಯವರು ಮಸೀದಿಯನ್ನು ಮಂದಿರ ಎಂದು ಕರೆಯುತ್ತಾರೆ. ದ್ವೇಷದ ಮತ್ತು ಹೃದಯಗಳನ್ನು ಒಗ್ಗೂಡಿಸದ ಏಕರೂಪ ನಾಗರಿಕ ಸಂಹಿತೆಯಂತಹ ಸಮಸ್ಯೆಗಳನ್ನು ಎತ್ತುತ್ತಾರೆ. 2024 ರ ಚುನಾವಣೆಗಳು ಇರುವುದರಿಂದ, ಎಲ್ಲಾ ಹಿಂದೂಗಳು ಅದರೊಂದಿಗೆ ಇರಲು ಹಿಂದೂ-ಮುಸ್ಲಿಂ ದ್ವೇಷದ ಹೆಸರಿನಲ್ಲಿ ಎಲ್ಲವನ್ನೂ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ರೀತಿಯಾಗಿ ಮಂದಿರ-ಮಸೀದಿ ವಿವಾದ ಪ್ರಕರಣಗಳ ಬಗ್ಗೆ ಕೇಳಿದಾಗ ಪ್ರತಿಕ್ರಿಯೆ ನೀಡಿದ ಬಾರ್ಕ್ ಅವರು ಮುಸ್ಲಿಮರು ದುರ್ಬಲರಲ್ಲ, ತಮ್ಮ ಮಸೀದಿಗಳನ್ನು ದೇವಾಲಯಗಳಾಗಿ ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಎಂದು ತಮ್ಮ ಧರ್ಮದ ಬಗೆಗಿನ ನಿಲುವನ್ನು ತಿಳಿಸಿದ್ದಾರೆ.

You may also like

Leave a Comment